(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.30. ಹೆಚ್ಚಾಗುತ್ತಿರುವ ನಗರೀಕರಣದಿಂದಾಗಿ ವನ್ಯಜೀವಿ ಆವಾಸಸ್ಥಾನ ನಾಶವಾಗುತ್ತಿದ್ದು, ಇದರಿಂದ ಆನೆಗಳ ಸಂತತಿ ಮೇಲೆ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ.
ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸ್ (NCBS) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಸಂಶೋಧಕರು ಹಂಚಿಕೊಂಡ ಅಧ್ಯಯನ ವರದಿಯ ಅನ್ವಯ, ವನ್ಯಜೀವಿ ಆವಾಸಸ್ಥಾನ ಕಡಿತ ಮತ್ತು ಹೆಚ್ಚಿದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಏಷ್ಯಾಟಿಕ್ ಆನೆಗಳ ನೈಸರ್ಗಿಕ ಜೀನ್ ಪೂಲ್ ಮೇಲೆ (ಅನುವಂಶಿಕತೆ) ಪರಿಣಾಮ ಬೀರಿದೆ ಎಂದು ಗಮನಿಸಿದೆ.