ಐಐಎಫ್ಎ- 2024: ಶಾರುಕ್ ಖಾನ್ ಗೆ ಅತ್ಯುತ್ತಮ ನಟ ಪ್ರಶಸ್ತಿ- ʼಅನಿಮಲ್ʼ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಅಬುಧಾಬಿ, ಸೆ.30. ಸೂಪರ್ ಸ್ಟಾರ್ ಶಾರುಕ್ ಖಾನ್ ʼ ಐಐಎಫ್ಎ(IIFA)- 2024ʼ ರ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮತ್ತು ʼಅನಿಮಲ್ʼ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಮತ್ತು ಪೋಷಕ ನಟ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.


ನಟ ವಿಕ್ಕಿ ಕೌಶಲ್ ಮತ್ತು ನಿರ್ದೇಶಕ ಕರಣ್ ಜೋಹರ್ ಐಐಎಫ್ಎ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನಡೆಸಿಕೊಟ್ಟಿದ್ದಾರೆ. ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಅನಿಮಲ್ (ANIMAL) ಚಿತ್ರ ಪಡೆದುಕೊಂಡಿದ್ದು, ‘ಮಿಸಸ್ ಚಟರ್ಜಿ vs ನಾರ್ವೆ‘ ಚಿತ್ರದಲ್ಲಿ ನಾಯಕಿ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ರಾಣಿ ಮುಖರ್ಜಿ ಪಡೆದಿದ್ದಾರೆ.

Also Read  ಪುತ್ತೂರು :ಬಲ್ಯಾಡು ಕಾಡ್ಲ ದೈವಸ್ಥಾನದಿಂದ ಕಳವಾದ ಸೊತ್ತುಗಳು ಪತ್ತೆ ➤ ಕಳ್ಳರ ಪತ್ತೆಗಾಗಿ ಶೋಧ ಕಾರ್ಯಾ

 

 

error: Content is protected !!
Scroll to Top