ಪುತ್ತೂರು: ಜ್ಯೋತಿಷ್ಯ ಕೇಳಲು ಬಂದ ಬಾಲಕಿಯ ಮೇಲೆ ಅತ್ಯಾಚಾರ ► ಆರೋಪಿಯ ಬಂಧನ



(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.11. ಜ್ಯೋತಿಷ್ಯ ಕೇಳಲೆಂದು ಆಗಮಿಸಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ ಘಟನೆ ಶನಿವಾರದಂದು ನಡೆದಿದೆ.







ಬಂಧಿತ ಆರೋಪಿಯನ್ನು ತನ್ನ ಮನೆಯಲ್ಲಿಯೇ ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದ್ದ ಪುತ್ತೂರಿನ ಬನ್ನೂರು ನೆಕ್ಕಿಲ ನಿವಾಸಿ ಬಾಲಚಂದ್ರ ಆಚಾರ್ಯ(34) ಎಂದು ಗುರುತಿಸಲಾಗಿದೆ. ಅವಿವಾಹಿತನಾಗಿರುವ ಈತ ಮಾರ್ಚ್ 03 ರಂದು ಜ್ಯೋತಿಷ್ಯ ಕೇಳಲೆಂದು ತನ್ನ ಮನೆಯವರೊಂದಿಗೆ ಬಂದಿದ್ದ ಬಾಲಕಿಯನ್ನು ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿ ಬಾಲಕಿಯ ಹೆತ್ತವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.






error: Content is protected !!
Scroll to Top