ಪಿ.ಎ. ಫಾರ್ಮಸಿಯ ಕಾಲೇಜು ವತಿಯಿಂದ ಯೆನೆಪೋಯ ಆರ್ಯುವೇದಿಕ್ ಆಸ್ಪತ್ರೆ ರೋಗಿಗಳಿಗೆ ಉಚಿತ ಗಾಲಿ ಕುರ್ಚಿ ವಿತರಣೆ

(ನ್ಯೂಸ್ ಕಡಬ) newskadaba.com ದೇರಳಕಟ್ಟೆ, ಸೆ. 27. ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ವತಿಯಿಂದ “ವಿಶ್ವ ಔಷಧ ತಜ್ಞರ ದಿನ”ದ ಅಂಗವಾಗಿ ನರಿಂಗಾನ ಗ್ರಾಮದ ಕಲ್ಲೊರ ಕೋಡಿಯಲ್ಲಿರುವ ಯೆನೆಪೋಯ ಆರ್ಯುವೇದಿಕ್ ಆಸ್ಪತ್ರೆಯ ರೋಗಿಗಳಿಗೆ ಉಚಿತ ಗಾಲಿ ಕುರ್ಚಿ ಹಾಗೂ ಹಣ್ಣುಹಂಪಲುಗಳನ್ನು ವಿತರಿಸಲಾಯಿತು.

ಬಳಿಕ ಸೋಮೇಶ್ವರದಲ್ಲಿರುವ ಪಶ್ಚಿಮ್ ರಿಹಾಬಿಲೇಶನ್ ಸೆಂಟರ್ ಮಾನಸಿಕ ಪುನಶ್ಚೇತನ ಕೇಂದ್ರದಲ್ಲಿರುವ ಆಶ್ರಮ ನಿವಾಸಿಗಳಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿ, ಆರೋಗ್ಯ ಸಂರಕ್ಷಣೆಯ ಮಾಹಿತಿಗಳನ್ನು ನೀಡಿ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಪಿ.ಎ. ಎಜ್ಯುಕೇಶನಲ್ ಟ್ರಸ್ಟ್ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಶರ್ಫುದ್ಧೀನ್ ಪಿ.ಕೆ., ಪಿ.ಎ. ಮ್ಯಾನೇಜ್‌ಮೆಂಟ್ ಸ್ಟಡೀಸ್ ಇದರ ಡೈರೆಕ್ಟರ್ ಡಾ. ಸಯ್ಯದ್ ಅಮೀನ್, ಪ್ರೊಫೆಸರ್ ಡಾ. ಮುಹಮ್ಮದ್ ಮುಬೀನ್ ಮತ್ತಿತರರು ಉಪಸ್ಥಿತರಿದ್ದರು.

Also Read  ಆನ್‌ಲೈನ್‌ ಮೂಲಕ ಮನೆ ಮನೆಗೆ ಮಧ್ಯ ಪೂರೈಕೆಗೆ ಸರ್ಕಾರ ಚಿಂತನೆ ➤ ಆಗಸ್ಟ್‌ನಿಂದ ಹೋಂ ಡೆಲಿವರಿ ಸೇವೆ ಜಾರಿ ಸಾಧ್ಯತೆ

 

error: Content is protected !!
Scroll to Top