ಪುಂಜಾಲಕಟ್ಟೆ: ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ► ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.10. ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರದಂದು ನಡೆದಿದೆ.

ಮೃತ ಮಹಿಳೆಯನ್ನು ಪುಂಜಾಲಕಟ್ಟೆ ಸಮೀಪದ ತುರ್ಕಳಿಕೆಯ ಗುಂಡಿಮನೆ ನಿವಾಸಿ ಹರ್ಷಿಯಾ ಬಾನು ಎಂದು ಗುರುತಿಸಲಾಗಿದೆ. ಈಕೆಯನ್ನು ಕಳೆದ ಸುಮಾರು ಮೂರು ವರ್ಷಗಳ ಹಿಂದೆ ವಿಟ್ಲ ಸಮೀಪದ ಕಂಬಳಬೆಟ್ಟು ಶಾಂತಿನಗರದ ಆಸಿಫ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಆಸಿಫ್ ಹಾಗೂ ಮನೆಯವರು ಈಕೆಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ‌ ನೀಡಿದ್ದಲ್ಲದೆ ಕಳೆದ ಕೆಲವು ತಿಂಗಳುಗಳ ಹಿಂದೆ ತವರು ಮನೆಯಲ್ಲಿ ಬಿಟ್ಟು ಹೋಗಿದ್ದರೆನ್ನಲಾಗಿದೆ. ಈ‌ ಬಗ್ಗೆ ಬೇಸತ್ತು ಹರ್ಷಿಯಾ ಬಾನು ಮಾರ್ಚ್ 02 ರಂದು ತವರು ಮನೆಯಲ್ಲೇ ಸೀಮೆ ಎಣ್ಣೆ ಸುರಿದು ಬೆಂಕಿ‌ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾಗಿದೆ. ಈಕೆಯನ್ನು ತೀವ್ರ ತರದ ಸುಟ್ಟ ಗಾಯಗಳೊಂದಿಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಶನಿವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Also Read  ಬಂಟ್ವಾಳ: ಬಿಜೆಪಿ ನವ ಕರ್ನಾಟಕ ಪರಿವರ್ತನಾ ಯಾತ್ರೆ ► ಸರಕಾರ ಮುಸ್ಲಿಮರ ಸುನ್ನತನ್ನು ನಿಷೇಧಿಸಲಿ - ಕೆ.ಎಸ್.ಈಶ್ವರಪ್ಪ ► ರಮಾನಾಥ ರೈಗೆ ತಾಕತ್ತಿದ್ದರೆ ಕಲ್ಲಡ್ಕ ಭಟ್ ರನ್ನು ಬಂಧಿಸಲಿ - ಶೋಭಾ ಕರಂದ್ಲಾಜೆ

error: Content is protected !!
Scroll to Top