ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತರು

(ನ್ಯೂಸ್ ಕಡಬ) newskadaba.com ಸೆ. 28. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ನಡೆದ ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟವಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ/ಸ್ನಾತಕೋತ್ತರ ಸೇರಿದಂತೆ 3 ಪ್ರತ್ಯೇಕ ವಿಭಾಗಗಳಲ್ಲಿ ನಡೆದ ಈ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಹುಮಾನ ವಿಜೇತರಿಗೆ ಅಕ್ಟೋಬರ್ 2ರಂದು ಮಂಗಳೂರು ಪುರಭವನ ಆವರಣದಲ್ಲಿ ಜಿಲ್ಲಾಡಳಿತ ವತಿಯಿಂದ ನಡೆಯುವ  ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಬಂಧ ಸ್ಪರ್ಧೆ ವಿಜೇತರ ವಿವರ:
ಪ್ರೌಢಶಾಲೆ ವಿಭಾಗ
ಪ್ರಥಮ – ಪೂರ್ವಿತಾ ಕೆ.ವಿ, 10ನೇ ತರಗತಿ, ಸರಕಾರಿ ಪ್ರೌಢಶಾಲೆ, ಆಲೆಟ್ಟಿ, ಸುಳ್ಯ ತಾ.
ದ್ವಿತೀಯ: ಶ್ರೇಯಾ, 10ನೇ ತರಗತಿ, ಸರಕಾರಿ ಪ್ರೌಢಶಾಲೆ, ವೇಣೂರು, ಬೆಳ್ತಂಗಡಿ ತಾ.
ತೃತೀಯ: ಕೆ. ನಿರೀಕ್ಷಾ, 10ನೇ ತರಗತಿ, ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ, ಗುರುಪುರ, ಮಂಗಳೂರು ತಾ.

Also Read  ಮಂಗಳೂರು ವಿಶ್ವವಿದ್ಯಾನಿಲಯ: ಸಂಶೋಧನಾ ಕಾರ್ಯಕ್ಕೆ ಅರ್ಜಿ ಆಹ್ವಾನ

ಪದವಿಪೂರ್ವ ವಿಭಾಗ
ಪ್ರಥಮ: ಶ್ರೀಪೂರ್ಣಾ ಜಿ.ಎಲ್, ಪ್ರಥಮ ಪಿ.ಯು.ಸಿ (ಕಲಾ), ಎಸ್.ಡಿ.ಎಂ. ಪದವಿಪೂರ್ವ ಕಾಲೇಜು, ಉಜಿರೆ
ದ್ವಿತೀಯ: ಅಂಶಿತಾ, ದ್ವಿತೀಯ ಪಿ.ಯು.ಸಿ (ವಿಜ್ಞಾನ) ಜೈನ್ ಪದವಿಪೂರ್ವ ಕಾಲೇಜು, ಮೂಡಬಿದ್ರೆ
ತೃತೀಯ: ಫಾತಿಮಾ ಮಿಸ್ಬಾ, ದ್ವಿತೀಯ ಪಿ.ಯು.ಸಿ (ವಾಣಿಜ್ಯ), ಹಸನಬ್ಬ ಮಾಸ್ಟರ್ ಕಾಂಪೋಸಿಟ್ ಪದವಿಪೂರ್ವ ಕಾಲೇಜು, ಕಾಟಿಪಳ್ಳ, ಮಂಗಳೂರು ತಾ.

ಪದವಿ/ಸ್ನಾತಕೋತ್ತರ ವಿಭಾಗ:
ಪ್ರಥಮ: ಮಧುರಾ ಎಸ್. ತೃತೀಯ ಬಿ.ಕಾಂ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ಧಕಟ್ಟೆ, ಬಂಟ್ವಾಳ ತಾಲೂಕು
ದ್ವಿತೀಯ: ಆಯಿಷತುಲ್ ಸೆಮೀನಾ, ಪ್ರಥಮ ಬಿ.ಕಾಂ, ಅನುಗ್ರಹ ಮಹಿಳಾ ಕಾಲೇಜು, ಕಲ್ಲಡ್ಕ, ಬಂಟ್ವಾಳ ತಾಲೂಕು
ತೃತೀಯ: ಪ್ರೇಕ್ಷಾ ಆರ್. ಕರ್ಕೇರಾ, ತೃತೀಯ ಬಿ.ಬಿ.ಎ. ಗೋವಿಂದದಾಸ ಕಾಲೇಜು, ಸುರತ್ಕಲ್

error: Content is protected !!
Scroll to Top