ಮೀನುಗಾರರ ಮಕ್ಕಳಿಗೆ ಮುಖ್ಯಮಂತ್ರಿ ವಿದ್ಯಾನಿಧಿ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಸೆ. 28. 2024-25ನೇ ಸಾಲಿನಿಂದ ಮುಖ್ಯಮಂತ್ರಿ ವಿದ್ಯಾನಿಧಿ ಕಾರ್ಯಕ್ರಮಕ್ಕೆ ಮೀನುಗಾರರ/ಮೀನುಕೃಷಿಕರ ಮಕ್ಕಳಿಗೆ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

8 ರಿಂದ 10ನೇ ತರಗತಿಯವರಿಗೆ (ಹೆಣ್ಣುಮಕ್ಕಳಿಗೆ ಮಾತ್ರ) ಮತ್ತು ಎಸ್.ಎಸ್.ಎಲ್.ಸಿ. ಪೂರ್ಣಗೊಳಿಸಿದ (ಹೆಣ್ಣು/ಗಂಡು ಮಕ್ಕಳು) ಹಾಗೂ ಕರ್ನಾಟಕ ರಾಜ್ಯ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು /ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‍ ವರೆಗೆ (ಪಿ.ಯು.ಸಿ/ಐ.ಟಿ.ಐ/ಡಿಪ್ಲೋಮ/ಬಿ.ಎ./ಬಿ.ಎಸ್.ಸಿ/ಬಿ.ಕಾಂ.ಇತ್ಯಾದಿ/ಎಲ್.ಎಲ್.ಬಿ/ಪ್ಯಾರಾಮೆಡಿಕಲ್/ಬಿ.ಪಾರ್ಮ್/ನರ್ಸಿಂಗ್/ಎಂ.ಬಿ.ಬಿ.ಎಸ್/ ಬಿ.ಇ./ಬಿ.ಟೆಕ್ ಮತ್ತು ಎಲ್ಲಾ ವೃತ್ತಿಪರ : ಸ್ನಾತಕೋತ್ತರ ಕೋರ್ಸ್‍ಗಳು) ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯದ ಮೀನುಗಾರರ / ಮೀನು ಕೃಷಿಕರ ಮಕ್ಕಳ ಬ್ಯಾಂಕ್‍ ಗಳ ಖಾತೆಗಳಿಗೆ ಶಿಷ್ಯವೇತನ (Scholarship)  ಯೋಜನೆ “ವಿದ್ಯಾನಿಧಿ” ಯೋಜನೆಯನ್ನು 2024-25ನೇ ಸಾಲಿಗೆ ಮುಂದುವರೆಸಲಾಗಿದ್ದು, ಶಿಷ್ಯವೇತನವನ್ನು ನೇರ ನಗದು ವರ್ಗಾವಣೆ  (Direct Benefit Transfer-DBT)  ಪದ್ಧತಿಯ ಮೂಲಕ ಪಾವತಿಸಲಾಗುತ್ತದೆ.

Also Read  ನೂಜಿಬಾಳ್ತಿಲ: ಉಚಿತ ಆಯುಷ್ಮಾನ್ ನೋಂದಣಿ ಅಭಿಯಾನ

8 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ “On Entitlement Basis” ಮುಖಾಂತರ ವಿದ್ಯಾರ್ಥಿವೇತನವನ್ನು ಪಾವತಿ ಮಾಡಲಾಗುತ್ತದೆ. ಪಿ.ಯು.ಸಿ ಮತ್ತು ತದನಂತರದ ಕೋರ್ಸ್‍ ಗಳಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳು “ಮುಖ್ಯಮಂತ್ರಿ ಮೀನುಗಾರರ ವಿದ್ಯಾನಿಧಿ ಯೋಜನೆ”ಯಡಿ ವಿದ್ಯಾರ್ಥಿವೇತನ ಪಡೆಯಲು “STATE SCHOLARSHIP PORTAL” ನಲ್ಲಿ ನೋಂದಾಯಿಸಿ ಅರ್ಜಿ ಸಲ್ಲಿಸಬೇಕು. ಅರ್ಹ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿ ಸೌಲಭ್ಯ ಪಡೆಯುವಂತೆ ಜಿಲ್ಲಾ ಮೀನುಗಾರಿಕಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top