ಐಟಿ ಕಾಯ್ದೆ ತಿದ್ದುಪಡಿ ರದ್ದು

(ನ್ಯೂಸ್ ಕಡಬ) newskadaba.com ಸೆ. 27. ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಕೇಂದ್ರ ಸರಕಾರ ತಂದಿರುವ ತಿದ್ದುಪಡಿಯನ್ನು ಅಸಾಂವಿಧಾನಿಕ ಎಂದು ಘೋಷಿಸಿರುವ ಮುಂಬೈ ಹೈಕೋರ್ಟ್ ಇದನ್ನು ರದ್ದು ಪಡಿಸಿದೆ. 2021ರ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ತಿದ್ದುಪಡಿಯನ್ನು ಜಾರಿಗೆ ತಂದಿದ್ದು, ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ಸರಕಾರಕ್ಕೆ ಸಂಬಂಧಿಸಿದ ವರದಿಗಳಲ್ಲಿರುವ ಸುಳ್ಳುಗಳನ್ನು ಪತ್ತೆ ಹಚ್ಚಲು ಒಂದು ಘಟಕವನ್ನು ಸ್ಥಾಪಿಸಲು ಮುಂದಾಗಿತ್ತು.

ಈ ಘಟಕವು ಯಾವುದೇ ಸುದ್ದಿಯನ್ನು ನಕಲಿಯೆಂದು ನಿರ್ಧರಿಸಿದರೆ, ಆನ್ ಲೈನ್ ಸಂಸ್ಥೆಗಳು ತಕ್ಷಣ ಅವುಗಳನ್ನು ತೆಗೆದು ಹಾಕಬೇಕಾಗಿತ್ತು. ಒಂದು ವೇಳೆ ತೆಗೆದುಹಾಕಲು ಹಿಂಜರಿದರೆ ಅವು ಕಾನೂನು ಕ್ರಮವನ್ನು ಎದುರಿಸಬೇಕಾಗಿತ್ತು. ಈಗಾಗಲೇ ಎಲ್ಲ ಮುದ್ರಣ ಮಾಧ್ಯಮಗಳು, ಟಿವಿಚಾನೆಲ್‌ಗಳನ್ನು ಭಾಗಶಃ ಹಣದ ಮೂಲಕ ಕೊಂಡುಕೊಂಡಿರುವ ಸರಕಾರ, ಪರ್ಯಾಯ ಮಾಧ್ಯಮವಾಗಿ ಸರಕಾರದ ವಿರುದ್ದ ಕೆಲಸ ಮಾಡುತ್ತಿರುವ ಆನ್‌ಲೈನ್ ವೇದಿಕೆಗಳನ್ನು ನಿಯಂತ್ರಿಸಲು ಈ ತಿದ್ದುಪಡಿಯನ್ನುತಂದಿದೆ ಎನ್ನುವುದು ಮೇಲ್ನೋಟಕ್ಕೆ ಅರ್ಥವಾಗಿ ಬಿಡುತ್ತದೆ.

Also Read  ತೆಲಂಗಾಣ: ಮರ್ಯಾದ ಹತ್ಯೆ ಪ್ರಕರಣದ ಆರೋಪಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

error: Content is protected !!
Scroll to Top