ಸೆ.29ರಂದು ಟ್ರಾಫಿಕ್ ಪೊಲೀಸರಿಗೆ ಶ್ವಾಸಕೋಶ ಆರೋಗ್ಯ ತಪಾಸಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 27. ಆ್ಯಂಟಿ ಪೊಲ್ಯೂಶನ್ ಡ್ರೈವ್ ಫೌಂಡೇಶನ್ (ಎಪಿಡಿಎಫ್) ನೇತೃತ್ವದಲ್ಲಿ ಎಜೆ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ನ ಸಹಭಾಗಿತ್ವದಲ್ಲಿ ಮಂಗಳೂರಿನ ಟ್ರಾಫಿಕ್ ಪೊಲೀಸರಿಗೆ ಶ್ವಾಸಕೋಶದ ಆರೋಗ್ಯ ತಪಾಸಣೆಯನ್ನು ಸೆ.29ರಂದು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಡಿಪಿಎಫ್ ನ ಸ್ಥಾಪಕ ಹಾಗೂ ಸಿಇಒ ಅಬ್ದುಲ್ಲಾ ಎ. ರಹ್ಮಾನ್‌, ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಅತೀ ಹೆಚ್ಚಾಗಿ ಬಾಧೆಗೆ ಒಳಗಾಗುವವರು ಟ್ರಾಫಿಕ್ ಪೊಲೀಸರಾಗಿರುವ ಕಾರಣ ಅವರ ಆರೋಗ್ಯದ ತಪಾಸಣೆಗೆ ನಿರ್ಧರಿಸಲಾಗಿದೆ ಎಂದರು.

Also Read  ಸುಬ್ರಹ್ಮಣ್ಯ- ಮಂಗಳೂರು ನಡುವೆ ಹೊಸ ರೈಲು ಸಂಚಾರ - ಕೇಂದ್ರ ರೈಲ್ವೇ ಸಚಿವರಿಗೆ ಕಟೀಲ್ ಮನವಿ

error: Content is protected !!
Scroll to Top