ಕೇಂದ್ರ ಸಹಕಾರ ಸಗಟು ಮಾರಾಟ ಸಂಘ ಮಹಾಸಭೆ- ಶೇ.10 ಡಿವಿಡೆಂಡ್ ಘೋಷಣೆ

(ನ್ಯೂಸ್ ಕಡಬ) newskadaba.com ಸೆ. 27. ದಕ್ಷಿಣ ಕನ್ನಡ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ ನಿ., ಮಂಗಳೂರು ಇದರ 2023-2024ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಕಚೇರಿಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾದ ಯಂ. ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದ ದಿವಂಗತ ಮೊಳಹಳ್ಳಿ ಶಿವರಾಯರನ್ನು ಸ್ಮರಿಸಿಕೊಂಡು ಸಂಘವು ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಗೊಂಡ ಪ್ರಮುಖ ಹಾಗೂ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾಗಿದೆ. ನಮ್ಮ ಗ್ರಾಹಕರ ಸಹಕಾರ ಸಂಘವು ಬೆಳವಣಿಗೆಯ ಹಾದಿಯಲ್ಲಿ ಮುಂದುವರಿದಿದ್ದು 2023-2024ನೇ ಸಾಲಿನಲ್ಲಿ 1.02ಕೋಟಿ ವ್ಯಾಪಾರ ಲಾಭ ಗಳಿಸಿದ್ದು, ರೂ.20.69 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ ಎಂದರು. ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಿಸಲಾಗಿದ್ದು, ಸದಸ್ಯರಿಗೆ ಪ್ರತಿ ಖರೀದಿ ಮೇಲೆ ಶೇ.2 ರಿಯಾಯಿತಿ ನೀಡಲಾಗುತ್ತಿದೆ ಎಂದು ತಿಳಿಸಿ ಎಲ್ಲಾ ಸದಸ್ಯರು ಪ್ರಯೋಜನ ಪಡೆಯುವಂತೆ ತಿಳಿಸಿದರು. ಸಂಘದ ಆಗಲಿದ ಸದಸ್ಯರಿಗೆ, ವೀರಯೋಧರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.
ಸಂಘದ ಉಪಾಧ್ಯಕ್ಷ ದಿನೇಶ್ ಹೆಗ್ಡೆ  ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕಿ ನಳಿನಿ ಟಿ ವಾರ್ಷಿಕ ಮಹಾಸಭೆ ನೋಟೀಸು ಓದಿ ಹೇಳಿದರು.
ಸಂಘದ ನಿರ್ದೇಶಕರಾದ  ಜನಾರ್ಧನ ಬಿ. ನಿವೃತ್ತ ಸಹಾಯಕ ನಿಬಂಧಕರು,  ಕುಂಬ್ಳೆಕಾರ್ ಮೋಹನ್ ಕುಮಾರ್, ಸಹಕಾರ ರತ್ನ  ಚಿತ್ತರಂಜನ್ ಬೋಳಾರ್,  ಶಶಿಧರ ಶೆಟ್ಟಿ,  ನವೀನ್ ಬಾಳುಗೋಡು,  ಸಂಜೀವ ಮೊಯಿಲಿ,  ಪಕೀರಪ್ಪ,  ಮದಲಾಕ್ಷಿ, ಪ್ರಭಾಮಾಲಿನಿ,  ಶಶಿಧರ್ ಶೆಟ್ಟಿ,  ಚಿನ್ನಪ್ಪ ಗೌಡ, ಸಹಕಾರ ಸಂಘಗಳ ಉಪ ನಿಬಂಧಕರು ಉಪಸ್ಥಿತರಿದ್ದರು.

error: Content is protected !!
Scroll to Top