(ನ್ಯೂಸ್ ಕಡಬ) newskadaba.com ಸೆ. 27. 2024ನೇ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಕೇಂದ್ರ ಸರಕಾರದ ವತಿಯಿಂದ ಸ್ಟೇಟ್ ಸ್ಕಾಲರ್ ಶಿಪ್ ಯೋಜನೆಯಡಿ ಪೋಸ್ಟ್ ಮೆಟ್ರಿಕ್ ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದ್ಯಾರ್ಥಿವೇತನ ನೀಡುವ ಸಲುವಾಗಿ ಹಾಗೂ ನ್ಯಾಷನಲ್ ಇ-ಸ್ಕಾಲರ್‍ಶಿಪ್ ಯೋಜನೆಯಡಿ ಪ್ರಿ ಮೆಟ್ರಿಕ್ ಹಾಗೂ ಟಾಪ್ ಕ್ಲಾಸ್ ವಿಕಲಚೇತನ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ನ್ಯಾಷನಲ್ ಇ-ಸ್ಕಾಲರ್‍ಶಿಪ್ ಯೋಜನೆಯಡಿ ವಿದ್ಯಾರ್ಥಿವೇತನ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿರುವ ವಿಕಲಚೇತನ ವಿದ್ಯಾರ್ಥಿಗಳು ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳ ಮೂಲಕ ಈ ಯೋಜನೆಗೆ ವೆಬ್‍ಸೈಟ್ ಮೂಲಕ ಆನ್ ಲೈನ್ ಅರ್ಜಿಯನ್ನು ಆಯಾ ತಾಲೂಕಿನ ವಿ.ಆರ್.ಡಬ್ಲ್ಯೂ ಎಂ.ಆರ್.ಡಬ್ಲೂ ಹಾಗೂ ಯು.ಆರ್.ಡಬ್ಲೂಗಳ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ಎಂ.ಆರ್.ಡಬ್ಲ್ಯೂಗಳಾದ ಮಂಗಳೂರು ಜಯಪ್ರಕಾಶ್ – 9110897458, ಬಂಟ್ವಾಳ ಗೀರೀಶ್ – 9164645616, ಪುತ್ತೂರು ನವೀನ್ – 9686682251, ಸುಳ್ಯ ಚಂದ್ರಶೇಖರ- 815300057, ಕಡಬ ಅಕ್ಷತಾ – 7899579773, ಬೆಳ್ತಂಗಡಿ – ಜಾನ್ – 7975199473 ಹಾಗೂ ಇಲಾಖೆ ದೂ.ಸಂಖ್ಯೆ: 0824-2455999, 0824-2458173 ಅಥವಾ ಇಲಾಖೆಯ ವೆಬ್ ಸೈಟ್ Website: www.disabilityaffairs.gov.in ನಲ್ಲಿ ಮಾಹಿತಿ ಪಡೆಯುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.