ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹ

 (ನ್ಯೂಸ್ ಕಡಬ) newskadaba.com ಕೆ.ಆರ್.ಪೇಟೆ (ಸೆ.27)  ಮಹಿಳೆಯರು ಮತ್ತು ಒಕ್ಕಲಿಗ ಸಮುದಾಯದ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ತಾಲೂಕು ಒಕ್ಕಲಿಗ ಮಹಿಳಾ ಸಂಘ ಆಗ್ರಹಿಸಿದೆ.

ಎಲ್ಲಿ ಮಹಿಳೆಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿದ್ದಾರೆ ಎಂದು ನಂಬಿರುವ ದೇಶ ನಮ್ಮದು. ಒಕ್ಕಲಿಗ ಸಮುದಾಯ ನಾಡಿಗೆ ಅನ್ನ ನೀಡುವ ಸಮುದಾಯ. ಎಲ್ಲಾ ಜಾತಿ, ಧರ್ಮ ಮತ್ತು ಸಂಸ್ಕೃತಿಯನ್ನು ಗೌರವಿಸಿ ನಡೆಯುತ್ತಿರುವರರು ಒಕ್ಕಲಿಗ ಸಮುದಾಯದ ಜನ. ಶಾಂತಿ ಮತ್ತು ಸಹಬಾಳ್ವೆಯಿಂದ ಬದುಕುತ್ತಿರುವ ಒಕ್ಕಲಿಗ ಸಮಾಜವನ್ನು ಶಾಸಕ ಮುನಿರತ್ನ ಅವಹೇಳನಕಾರಿಯಾಗಿ ನಿಂದಿಸಿದ್ದಾನೆ. ಜನಾಂಗ ನಿಂದನೆ ಮಾಡಿರುವ ಮುನಿರತ್ನ ಶಾಸಕನಾಗಿರುಲು ಯೋಗ್ಯನಲ್ಲ. ರಾಜ್ಯ ವಿದಾನ ಸಭೆಯ ಸ್ಪೀಕರ್ ಅವರು ತಕ್ಷಣವೇ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಮುನಿರತ್ನ ಅವರ ಪರ ನಿಲ್ಲುವ ಬದಲು ರಾಜ್ಯ ಬಿಜೆಪಿ ಮುಖಂಡರು ಪಕ್ಷದ ಹಿತದೃಷ್ಠಿಯಿಂದ ಮುನಿರತ್ನ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಒಕ್ಕಲಿಗ ಮಹಿಳಾ ಸಂಘಟನೆಯ ಕಾರ್ಯಕರ್ತೆಯರು ಆಗ್ರಹಿಸಿದರು.

Also Read  ಚಾಲಕನ ಅತಿವೇಗದ ಪರಿಣಾಮ ಸುಳ್ಯದಲ್ಲಿ ಸರಣಿ ಅಪಘಾತ

error: Content is protected !!
Scroll to Top