(ನ್ಯೂಸ್ ಕಡಬ) newskadaba.com ನವದೆಹಲಿ(ಸೆ.27) ಭಾರೀ ವೇಗದ ಆರ್ಥಿಕಾಭಿವೃದ್ಧಿಯಿಂದ ಜಗತ್ತಿನ ಗಮನ ಸೆಳೆದಿರುವ ಭಾರತ ಇದೀಗ ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ಪೈಕಿ ಮೂರನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಪಟ್ಟಿಯಲ್ಲಿ ಜಪಾನ್ ದೇಶವನ್ನು ಹಿಂದಿಕ್ಕಿರುವ ಭಾರತವು ಅಮೆರಿಕ ಮತ್ತು ಚೀನಾದ ನಂತರದ ಸ್ಥಾನಕ್ಕೆ ಏರಿದೆ. ಭಾರೀ ವೇಗದ ಆರ್ಥಿಕಾಭಿವೃದ್ಧಿಯಿಂದ ಜಗತ್ತಿನ ಗಮನ ಸೆಳೆದಿರುವ ಭಾರತ ಇದೀಗ ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ಪೈಕಿ ಮೂರನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಆಸ್ಟ್ರೇಲಿಯಾದ ಲೋವಿ ಇನ್‌ಸ್ಟಿಟ್ಯೂಟ್ ‘2024ನೇ ಆವೃತ್ತಿಯ ಏಷ್ಯಾ ಪವರ್ ಇಂಡೆಕ್ಸ್ (ಎಪಿಐ)’ ಹೆಸರಿನ ಈ ವರದಿ ಸಿದ್ಧಪಡಿಸಿದ್ದು, ಇದನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.
ಜಪಾನ್ ನನ್ನು ಹಿಂದಿಕ್ಕಿದ ಭಾರತ: ಏಷ್ಯಾ ಫೆಸಿಫಿಕ್ ನಲ್ಲಿ ಟಾಪ್ 3ನೇ ದೇಶ
