ಕೇರಳ: ಹೆದ್ದಾರಿ ಮಧ್ಯೆ ಚಿನ್ನ ದರೋಡೆ

 (ನ್ಯೂಸ್ ಕಡಬ) newskadaba.com ಕೇರಳ(ಸೆ.27) :  ಕೇರಳದ ತ್ರಿಶ್ಶೂರ್ ಬಳಿಯ ಪೀಚಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ದರೋಡೆ ಪ್ರಕರಣದ ಡ್ಯಾಷ್ ಕ್ಯಾಮ್ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೆದ್ದಾರಿಯಲ್ಲಿ ಕಾರನ್ನು ತಡೆದ 12 ಮಂದಿಗಳ ಗುಂಪು ಆ ಕಾರಿನಲ್ಲಿದ್ದ ಇಬ್ಬರ ಸಹಿತ 2.5 ಕೆ.ಜಿ ಚಿನ್ನವನ್ನು ದರೋಡೆ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ. ನಿರ್ಮಾಣ ಹಂತದ ಫ್ಲೈಓವರ್ ನಲ್ಲಿ ಕಾರೊದನ್ನು ಗುರಿಯಾಗಿಸಿ ಬಂದ ಮೂರು ಕಾರುಗಳು ಹೆದ್ದಾರಿಯಲ್ಲಿ ಬ್ಲಾಕ್ ಮಾಡಿವೆ. ಚಿನ್ನ ಸಾಗಿಸುತ್ತಿದ್ದ ಕಾರನ್ನು ಇತರ ಮೂರು ಕಾರುಗಳು ಅಡ್ಡಗಟ್ಟಿ, ಬಳಿಕ 3ಕಾರುಗಳಿಂದ ಬಂದ 12 ಮಂದಿ ಗುಂಪುಗಟ್ಟಿ ಇಬ್ಬರನ್ನು ಅಪಹರಿಸಿದ್ದಾರೆ. ಈ ಸಂಬಂಧ ಬುಧವಾರ ದೂರು ನೀಡಲಾಗಿದ್ದು, ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಬಜೆಟ್‌ನಲ್ಲಿ ಕರಾವಳಿ ಭಾಗದ ಮೀನುಗಾರಿಕೆಗೆ ಬಂಪರ್    ➤ ಹಳೆ ಘೋಷಣೆಗಳಿಗೆ ಅನುದಾನ…!!!

error: Content is protected !!
Scroll to Top