ನಾಳೆ (ಮಾ.11) ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.10. ನಾಳೆ (ಮಾರ್ಚ್ 11) ಎರಡನೇ ಸುತ್ತಿನಲ್ಲಿ ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು, ತಾಲೂಕುವಾರು ಬೂತುಗಳ ಸಂಖ್ಯೆ ಹಾಗೂ ಮಕ್ಕಳ ಸಂಖ್ಯೆ ಈ ಕೆಳಗಿನಂತಿದೆ.

ಬಂಟ್ವಾಳ ತಾಲೂಕು – 190 ಬೂತ್‍ಗಳು, 31562 ಮಕ್ಕಳು, ಬೆಳ್ತಂಗಡಿ ತಾಲೂಕು – 164 ಬೂತ್‍ಗಳು, 21814 ಮಕ್ಕಳು, ಮಂಗಳೂರು ತಾಲೂಕು – 351 ಬೂತ್‍ಗಳು, 73,647 ಮಕ್ಕಳು, ಪುತ್ತೂರು ತಾಲೂಕು – 145 ಬೂತ್‍ಗಳು, 21138 ಮಕ್ಕಳು,
ಸುಳ್ಯ ತಾಲೂಕು-75 ಬೂತ್‍ಗಳು, 10856 ಮಕ್ಕಳು,
ಒಟ್ಟು ಬೂತುಗಳ ಸಂಖ್ಯೆ -925, ಒಟ್ಟು ಮೊಬೈಲ್ ಬೂತುಗಳ ಸಂಖ್ಯೆ –    9  (ಮಂಗಳೂರು (ಗ್ರಾ) 2, ಮಹಾನಗರ ಪಾಲಿಕೆ 4, ಪುತ್ತೂರು ನಗರ 1, ಸುಳ್ಯ 2).
ಒಟ್ಟು ಟ್ರಾನ್ಸಿಟ್ ತಂಡ -26  (ಬಸ್‍ಸ್ಟಾಂಡ್, ರೈಲ್ವೇ ಸ್ಟೇಷನ್, ವಿಮಾನ ನಿಲ್ದಾಣಗಳಂತಹ ಸ್ಥಳಗಳಲ್ಲಿ) ಜಿಲ್ಲೆಯಾದ್ಯಂತ ನಿರ್ಮಾಣ ಮಾಡಲಾಗಿದೆ. ಹಿಂದಿನ ವರ್ಷಗಳ ಪಲ್ಸ್ ಪೋಲಿಯೋ ಕಾರ್ಯಕ್ರಮದ ವರದಿಯನ್ನು ಪರಾಮರ್ಶಿಸಿ ಈ ವರ್ಷ ಸದ್ರಿ ಕಾರ್ಯಕ್ರಮಕ್ಕೆ ಮೊಬೈಲ್ ಮತ್ತು ಟ್ರಾನ್ಸಿಟ್ ತಂಡಗಳ ಒಟ್ಟು ಮಕ್ಕಳ ಅಂದಾಜು ಪಟ್ಟಿ ತಯಾರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 0-5 ವರ್ಷದ ಮಕ್ಕಳ ಸಂಖ್ಯೆ 1,59,017 ಮತ್ತು ಮೊಬೈಲ್/ಟ್ರಾನ್ಸಿಟ್ ತಂಡಗಳ ಅಂದಾಜು ಮಕ್ಕಳ ಸಂಖ್ಯೆ 8087.

Also Read  ವೆನ್ಲಾಕ್ಗೆ ಜಿಲ್ಲಾಧಿಕಾರಿ ಭೇಟಿ

ಮಾರ್ಚ್ 11 ರಂದು  ಬೆಳಿಗ್ಗೆ 8 ರಿಂದ 5 ಗಂಟೆವರೆಗೂ ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು, 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ 2 ಹನಿ ಪೋಲಿಯೋ ಹನಿ ಹಾಕಿಸಿ ಜೀವನ ಪೂರ್ತಿ ಪೋಲಿಯೋ ವಿರುದ್ಧ ವಿಜಯ ಸಾಧಿಸುವುದನ್ನು ಮುಂದುವರಿಸೋಣ. ಭಾರತ ಪೋಲಿಯೋ ಮುಕ್ತ ದೇಶವಾದರೂ, ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ನೈಜೀರಿಯಾ ಈ ಮೂರು ದೇಶಗಳಲ್ಲಿ ಮಾತ್ರ ಪೋಲಿಯೋ ಪ್ರಕರಣಗಳು ಇನ್ನೂ ಪತ್ತೆಯಾಗುತ್ತಿದ್ದು, ಜನರು ಭಾರತ ದೇಶದಿಂದ ಸದ್ರಿ ದೇಶಗಳಿಗೆ ಹಾಗೂ ಆ ದೇಶಗಳಿಂದ ಭಾರತ ದೇಶಕ್ಕೆ ಪ್ರಯಾಣ ಬೆಳೆಸುತ್ತಿರುವುದರಿಂದ ಪೋಲಿಯೋ ರೋಗ ಹರಡುವ ಸಾಧ್ಯತೆಗಳಿರುವುದರಿಂದ ಮತ್ತೇ ಮತ್ತೇ ಪೋಲಿಯೋ ಹನಿಗಳನ್ನು ತಪ್ಪದೇ ತಮ್ಮ ಮಕ್ಕಳಿಗೆ (0-5) ಹಾಕಿಸುವುದನ್ನು ಮರೆಯದಿರಿ. ಬಿಸಿಲಿನ ತಾಪ ಜಾಸ್ತಿಯಿರುವುದರಿಂದ ಎಲ್ಲಾ ಪೋಷಕರು ತಮ್ಮ ಮುದ್ದು ಕಂದಮ್ಮಗಳಿಗೆ ಬೆಳಿಗ್ಗೆ ಬೇಗನೆ ಬಂದು ಪೋಲಿಯೋ ಹನಿಗಳನ್ನು ಹಾಕಿಸಿಕೊಳ್ಳಬೇಕಾಗಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ, ದ.ಕ ಮಂಗಳೂರು ಇವರು ಪ್ರಕಟಣೆಯಲ್ಲಿ ಎಲ್ಲಾ ಪೋಷಕರಲ್ಲಿ ವಿನಂತಿಸಿದ್ದಾರೆ‌.

Also Read  ಎಸ್ಸೆಸ್ಸೆಲ್ಸಿ ಪರೀಕ್ಷೆಯ ತಯಾರಿ ಬಗ್ಗೆ ನೇರ ಫೋನ್ ಇನ್ ಕಾರ್ಯಕ್ರಮ

error: Content is protected !!
Scroll to Top