ಟಿ20- ಟೆಸ್ಟ್‌ ಗೆ ನಿವೃತ್ತಿ ಘೋಷಿಸಿದ ಶಕೀಬ್ ಅಲ್ ಹಸನ್

(ನ್ಯೂಸ್ ಕಡಬ) newskadaba.com ಕಾನ್ಪುರ, ಸೆ. 26. ಬಾಂಗ್ಲಾದೇಶದ ಹಿರಿಯ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರು ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ ಅರಂಭಕ್ಕೂ ಮುನ್ನವೇ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದದ ತವರಿನ ಸರಣಿ ಅವರಿಗೆ ಕೊನೆಯ ಟೆಸ್ಟ್‌ ಪಂದ್ಯವಾಗಿರಲಿದೆ ಎಂದು ಹೇಳಿದ್ದಾರೆ.

ಆಗಸ್ಟ್‌ ನಲ್ಲಿ ಶೇಖ್ ಹಸೀನಾ ಆಡಳಿತದ ರಾಜಕೀಯ ಕ್ರಾಂತಿಯ ನಂತರ 37 ವರ್ಷದ ಶಕೀಬ್ ಬಾಂಗ್ಲಾದೇಶಕ್ಕೆ ಪ್ರಯಾಣಿಸಿಲ್ಲ. ಮಾಜಿ ಪ್ರಧಾನಿ ಶೇಕ್‌ ಹಸೀನಾ ನೇತೃತ್ವದ ಅವಾಮಿ ಲೀಗ್‌ ಪಕ್ಷದ ಸದಸ್ಯನಾಗಿದ್ದರು. ಕಳೆದ ತಿಂಗಳು ಢಾಕಾದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಸಲಾದ 147 ಜನರಲ್ಲಿ ಶಕೀಬ್ ಅಲ್ ಹಸನ್ ಹೆಸರೂ ಕೂಡ ಇತ್ತು. ಇದಾದ ಬಳಿಕ ಅವರು ಬಾಂಗ್ಲಾಗೆ ತೆರಳಿಲ್ಲ.

Also Read  ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಕಾದಿದೆ ಬಿಗ್ ಶಾಕ್…!!!!

 

error: Content is protected !!
Scroll to Top