ಮೂರು ತಿಂಗಳಲ್ಲಿ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು – ಸಚಿವ ಸೋಮಣ್ಣ

(ನ್ಯೂಸ್ ಕಡಬ) newskadaba.com ಸೆ. 26. ರೈಲ್ವೇ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, 2026ರ ಒಳಗೆ ಶಿವಮೊಗ್ಗ, ಶಿಕಾರಿಪುರ ರೈಲ್ವೇ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದರು.

ಈ ಕುರಿತು ಶಿವಮೊಗ್ಗದಲ್ಲಿ ರೈಲ್ವೆ ಯೋಜನೆಗಳ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೋಟೆ ಗಂಗೂರಿನಲ್ಲಿ ಕೋಚಿಂಗ್ ಡಿಪೋ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಮುಂದಿನ ಜೂನ್​​ನಲ್ಲಿ ಈ ಕಾಮಗಾರಿ ಮುಗಿಸುತ್ತೇವೆ ಎಂದರು. ಮೋದಿ ಮೂರನೇ ಬಾರಿ ಪ್ರಧಾನಿಯಾದ ಮೇಲೆ ರೈಲ್ವೇ ಇಲಾಖೆ ಐತಿಹಾಸಿಕ ಕಾರ್ಯಗಳನ್ನು ಮಾಡುತ್ತಿದೆ. ಕರ್ನಾಟಕದಲ್ಲಿ ಕೋಚಿಂಗ್ ಡಿಪೋ ಸಿದ್ಧವಾಗುತ್ತಿದ್ದು, ಅದು ಶಿವಮೊಗ್ಗದಲ್ಲೇ ಆಗುತ್ತಿರುವುದು ಗಮನಾರ್ಹ ಎಂದು ಹೇಳಿದರು. ರೈಲ್ವೆ ಇಲಾಖೆಯಲ್ಲಿಯಾವುದೇ  ಕಳಪೆ ಕಾಮಗಾರಿಯನ್ನು ಸಹಿಸಲ್ಲ. ರೈಲ್ವೆ ಇಲಾಖೆ ಎಂಬುದು ರಕ್ಷಣಾ ಇಲಾಖೆ ಇದ್ದ ಹಾಗೆ. ಇನ್ನು ಎರಡರಿಂದ ಮೂರು ತಿಂಗಳಲ್ಲಿ ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ ಬರಲಿದೆ ಎಂದು ಅವರು ಹೇಳಿದರು. ಶಿವಮೊಗ್ಗ ಶಿಕಾರಿಪುರ ರೈಲ್ವೆ ಯೋಜನೆಯ ಕೆಲಸ ಈಗಾಗಲೇ ಆರಂಭವಾಗಿದೆ.

Also Read  ಫೆ.13ರಿಂದ ಬೆಂಗಳೂರಲ್ಲಿ ಏರೋ ಇಂಡಿಯಾ ಏರ್‌ ಶೋ  ➤ ಸಿಎಂ ಬೊಮ್ಮಾಯಿ

 

error: Content is protected !!
Scroll to Top