ಮುಂಬೈನಲ್ಲಿ ವರುಣನ ಆರ್ಭಟಕ್ಕೆ ನಾಲ್ವರು ಬಲಿ: ಪ್ರಧಾನಿ ಮೋದಿ ಪುಣೆ ಭೇಟಿ ರದ್ದು

(ನ್ಯೂಸ್ ಕಡಬ) newskadaba.com  ಮುಂಬೈ, ಸೆ. 26. ಭಾರೀ ಮಳೆಗೆ ಮುಂಬೈನಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಭಾರೀ ಮಳೆಗೆ ನಾಲ್ವರು ಸಾವನ್ನಪ್ಪಿದ್ದು, ಶಾಲಾ ಕಾಲೇಜುಗೆ ರಜೆ ಘೋಷಿಸಲಾಗಿದೆ. ಮುಂಬೈನ ಕೆಲವು ಭಾಗಗಳಲ್ಲಿ ಬುಧವಾರ ಸಂಜೆ ಸುಮಾರು 275 ಮಿಮೀ ಮಳೆ ದಾಖಲಾಗಿದೆ, ಭಾರೀ ಮಳೆಗೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.

ಪ್ರಧಾನಿ ನರೇಂದ್ರ ಮೋದಿಯವರ ಪುಣೆ ಭೇಟಿಯನ್ನು ರದ್ದುಗೊಳಿಸಲಾಗಿದೆ. ಪುಣೆ ಮೆಟ್ರೋದ ಹೊಸ ಕಾರಿಡಾರ್ ಅನ್ನು ಉದ್ಘಾಟಿಸಲು ಪ್ರಧಾನಿ ಮೋದಿಯವರ ಆಗಮಿಸಬೇಕಿತ್ತು. ಭಾರತೀಯ ಹವಾಮಾನ ಇಲಾಖೆ (IMD) ಮುಂಬೈನಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, ಮುಂಬೈ ಸೇರಿದಂತೆ ಹಲವು ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. IMD ಮುನ್ಸೂಚನೆಯನ್ನು ಅನುಸರಿಸಿ ನಗರ ಆಡಳಿತವು ಮುಂಬೈನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಭಾರೀ ಮಳೆಯಿಂದಾಗಿ ಪುಣೆಯಲ್ಲೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

Also Read  ಕಡಬ: ಆಟೋ ರಿಕ್ಷಾ - ಪಿಕಪ್ ವಾಹನದ ನಡುವೆ ಅಪಘಾತ ➤‌ ನಾಲ್ಕು ವರ್ಷದ ಬಾಲಕ ಮೃತ್ಯು

error: Content is protected !!
Scroll to Top