ಕುಂತೂರು: ಅಂಗಡಿಗೆಂದು ತೆರಳಿದ್ದ ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಮಾ.09. ಫ್ಯಾನ್ಸಿ ಅಂಗಡಿಗೆಂದು ತೆರಳಿದ್ದ ಯುವತಿಯೋರ್ವಳು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಠಾಣಾ ವ್ಯಾಪ್ತಿಯ ಕುಂತೂರು ಎಂಬಲ್ಲಿ ಗುರುವಾರದಂದು ನಡೆದಿದೆ.

ನಾಪತ್ತೆಯಾದ ಯುವತಿಯನ್ನು ಕುಂತೂರು ಗ್ರಾಮದ ಗುತ್ತುಪಾಲ್ ನಿವಾಸಿ ದಿ| ಅಣ್ಣು ಎಂಬವರ ಪುತ್ರಿ ನಂದಿನಿ(22) ಎಂದು ಗುರುತಿಸಲಾಗಿದೆ. ಈಕೆ‌ ಗುರುವಾರದಂದು ಫ್ಯಾನ್ಸಿ ಅಂಗಡಿಗೆಂದು ತೆರಳಿದ್ದು, ಆ ನಂತರ ಮನೆಗೆ ಬಾರದೆ ಇದ್ದುದರಿಂದ ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿ ಪತ್ತೆಯಾಗಿಲ್ಲದ ಕಾರಣ ಶುಕ್ರವಾರದಂದು ಯುವತಿಯ ತಾಯಿ ಸುಂದರಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯ ಬಗ್ಗೆ ಮಾಹಿತಿ ಇದ್ದವರು ಕಡಬ ಪೊಲೀಸ್ ಠಾಣೆ 9480805364 ಸಂಖ್ಯೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಬೇಕೆಂದು ಪ್ರಕಟಣೆ ತಿಳಿಸಿದೆ.

Also Read  5 Use Cases for Secure Virtual Data Room

 

error: Content is protected !!
Scroll to Top