ಕ್ಯಾಲಿಫೋರ್ನಿಯಾದ ಬ್ಯಾಪ್ಸ್ ಶ್ರೀ ಸ್ವಾಮಿನಾರಾಯಣ ಮಂದಿರ ಧ್ವಂಸಗೊಳಿಸಿದ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com  ಕ್ಯಾಲಿಫೋರ್ನಿಯಾ, ಸೆ. 26. ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿರುವ ಬ್ಯಾಪ್ಸ್ ಶ್ರೀ ಸ್ವಾಮಿನಾರಾಯಣ ಮಂದಿರವನ್ನು ಸೆಪ್ಟೆಂಬರ್ 25 ರ ರಾತ್ರಿ ಹಿಂದೂ ವಿರೋಧಿ ಸಂದೇಶಗಳೊಂದಿಗೆ ಧ್ವಂಸಗೊಳಿಸಲಾಯಿತು. ನ್ಯೂಯಾರ್ಕ್‌ನ ಮೆಲ್‌ವಿಲ್ಲೆಯಲ್ಲಿರುವ ಬ್ಯಾಪ್ಸ್ ಮಂದಿರದಲ್ಲಿ ಇದೇ ರೀತಿಯ ಘಟನೆ ನಡೆದ ಹತ್ತು ದಿನಗಳ ನಂತರ ಈ ಅಪವಿತ್ರ ಕೃತ್ಯವು ಸಂಭವಿಸಿದೆ.

ನ್ಯೂಯಾರ್ಕ್​​ನಲ್ಲಿ ಸ್ವಾಮಿ ನಾರಾಯಣ ದೇವಾಲಯದ ಮೇಲೆ ನಡೆದ ದಾಳಿಯೂ ಕೂಡ ಕ್ಯಾಲಿಫೋರ್ನಿಯಾ ಹಾಗೂ ಕೆನಡಾದಲ್ಲಿ ನಡೆದ ಮಾದರಿಯಲ್ಲಿಯೇ ನಡೆದಿದೆ. ಇದರ ಹಿಂದೆ ಖಲಿಸ್ತಾನಿ ಉಗ್ರರ ಕೈವಾಡವಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Also Read  15ರ ಬಾಲಕನಿಗೆ ಸರ್ಪಕಾಟ - ಎರಡು ತಿಂಗಳ ಅವಧಿಯಲ್ಲಿ 9 ಬಾರಿ ಕಚ್ಚಿದ ನಾಗಪ್ಪ

 

error: Content is protected !!
Scroll to Top