ಉದುಮ ಮಾಜಿ ಶಾಸಕ ಕೆ.ಪಿ.ಕು೦ಞಿಕಣ್ಣನ್ ನಿಧನ

(ನ್ಯೂಸ್ ಕಡಬ) newskadaba.com  ಕಾಸರಗೋಡು, ಸೆ. 26. ರಸ್ತೆ ಅಪಘಾತದಲ್ಲಿ ಗಾಯಗೊಂಡು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಉದುಮ ಮಾಜಿ ಶಾಸಕ ಕೆ.ಪಿ.ಕು೦ಞಿಕಣ್ಣನ್(75) ಇಂದು ಬೆಳಗ್ಗೆ ನಿಧನರಾದರು. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.


ಸೆ.4ರಂದು ರಾಷ್ಟ್ರೀಯ ಹೆದ್ದಾರಿಯ ನೀಲೇಶ್ವರ ಕರುವೆಚ್ಚರಿ ಪೆಟ್ರೋಲ್ ಬಂಕ್ ಸಮೀಪ ಕುಂಞಿಕಣ್ಣನ್ ಸಂಚರಿಸುತ್ತಿದ್ದ ಕಾರು ಲಾರಿಯೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲೆತ್ನಿಸಿದಾಗ ರಸ್ತೆ ವಿಭಜಕಕ್ಕೆ ಢಿಕ್ಕಿಯಾಗಿತ್ತು. ಈ ವೇಳೆ ಗಾಯಗೊಂಡಿದ್ದು, ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರಿಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

Also Read  ➤ ನರ್ಸ್ ವೇಷ ಧರಿಸಿ ಮಗುವನ್ನು ಅಪಹರಿಸಿದ ಮಹಿಳೆ

 

 

error: Content is protected !!
Scroll to Top