(ನ್ಯೂಸ್ ಕಡಬ) newskadaba.com ಸೆ. 25. ಹಾಸನದ ಪಶುಪಾಲನ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದಲ್ಲಿ ರೈತರಿಗೆ ಪಶು ಪಾಲನಾ ಚಟುವಟಿಕೆಗಳ ಕುರಿತು ವಿವಿಧ ತರಬೇತಿಯನ್ನು ಅಕ್ಟೋಬರ್ ತಿಂಗಳಿನಲ್ಲಿ ಹಮ್ಮಿಕೊಳ್ಳಲಾಗಿದೆ.
ತರಬೇತಿಯ ವಿವರ
ಆಧುನಿಕ ಕುರಿ ಮತ್ತು ಮೇಕೆ ಸಾಗಾಣಿಕೆ ತರಬೇತಿ ಅಕ್ಟೋಬರ್ 3ರಿಂದ 4ರವರೆಗೆ ನಡೆಯಲಿದೆ. ಆಧುನಿಕ ಹೈನುಗಾರಿಕೆ ಬಗ್ಗೆ ತರಬೇತಿ ಅಕ್ಟೋಬರ್ 8 ರಿಂದ 9ರ ವರೆಗೆ, ಕೋಳಿ ಸಾಕಾಣಿಕೆ ತರಬೇತಿ 18ರಿಂದ 19ರ ವರೆಗೆ, ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಅಕ್ಟೋಬರ್ 21 ರಿಂದ 22 ರವರೆಗೆ ಹಾಗೂ 28 ರಿಂದ 29 ರವರೆಗೆ ನಡೆಯಲಿದೆ. ಆಸಕ್ತರು ಆಧಾರ್ ಕಾರ್ಡ್ ಪ್ರತಿಯೊಂದಿಗೆ ತರಬೇತಿ ಪ್ರಾರಂಭವಾಗುವ ದಿನಾಂಕದಂದು ಬೆಳಿಗ್ಗೆ 10.30 ಗಂಟೆ ಒಳಗೆ ತರಬೇತಿ ಕೇಂದ್ರದಲ್ಲಿ ಹಾಜರಾಗಬೇಕು. ಶಿಬಿರಾರ್ಥಿಗಳಿಗೆ ಯಾವುದೇ ಪ್ರಯಾಣ ಭತ್ಯೆ ಅಥವಾ ಸ್ಟೈಫಂಡ್ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ಸ್ಥಳೀಯ ಪಶು ವೈದ್ಯರನ್ನು ಅಥವಾ ತರಬೇತಿ ಕೇಂದ್ರದ ದೂರವಾಣಿ ಸಂಖ್ಯೆ 08172-235226 ಜಿಲ್ಲಾ ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.