ಪ್ರಧಾನಿ ಮೋದಿ: ಸಿದ್ದರಾಮಯ್ಯ ವಿರುದ್ಧ ತನಿಖೆಯಾಗಲೇಬೇಕು

(ನ್ಯೂಸ್ ಕಡಬ) newskadaba.com ಸೋನಿಪತ್(ಸೆ.25) : ಹರಿಯಾಣ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ಮುಡಾ ಪ್ರಕರಣದ ಪ್ರಸ್ತಾಪವಾಗಿದೆ‌. ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ತನಿಖೆಗೆ ಆದೇಶಿಸಿದೆ, ಅವರ ವಿರುದ್ಧ ತನಿಖೆಯಾಗಲೇಬೇಕು ಎಂದು ಆಗ್ರಹಿಸಿದ್ದಾರೆ. ಸಾರ್ವಜನಿಕ ‍ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಹೈಕಮಾಂಡ್‌ ಭ್ರಷ್ಟವಾದಾಗ ಕೆಳಗೆ ಇರುವವರಿಗೆ ಲೂಟಿ ಹೊಡೆಯಲು ಪರವಾನಿಗೆ ನೀಡಿದಂತಾಗಲಿದೆ. ಕಾಂಗ್ರೆಸ್ ಆಡಳಿತ ಮಾಡಿದ ಯಾವ ರಾಜ್ಯವೂ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಆಗಿದೆ. ಅಲ್ಲಿ ಯಾವ ಪರಿಸ್ಥಿತಿ ನಿರ್ಮಾಣವಾಗಿದೆ ನೋಡಿ. ಖುದ್ದು ಅಲ್ಲಿಯ ಮುಖ್ಯಮಂತ್ರಿ ವಿರುದ್ಧ ಭೂ ಹಗರಣದ ಆರೋಪ ಕೇಳಿ ಬಂದಿದೆ, ಹೈಕೋರ್ಟ್ ಚಾಟೀ ಬೀಸಿ ತನಿಖೆಗೆ ಆದೇಶಿಸಿದೆ ಎಂದು ತಿರುಗೇಟು ನೀಡಿದ್ದಾರೆ.

Also Read  ಜಲ್ಲಿ ಮಿಕ್ಸರ್ - ಸ್ಕೂಟಿ ಡಿಕ್ಕಿ ►ಇಬ್ಬರು ಮೃತ್ಯು

error: Content is protected !!
Scroll to Top