ದುಬೈಗೆ ಹೊರಟಿದ್ದ ವಿಮಾನದಲ್ಲಿ ಹೊಗೆ..!

(ನ್ಯೂಸ್ ಕಡಬ) newskadaba.com ಚೆನ್ನೈ (ಸೆ.25) :ಚೆನ್ನೈನಿಂದ ದುಬೈಗೆ ಹೊರಟಿದ್ದ ಎಮಿರೇಟ್ಸ್ ವಿಮಾನದ ರೆಕ್ಕೆ ಭಾಗದಿಂದ ಹೊಗೆ ಕಾಣಿಸಿಕೊಂಡಿದ್ದು ಪ್ರಯಾಣಿಕರು ಆತಂಕಗೊಂಡ ಘಟನೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ನಡೆದಿದೆ.


ಕಳೆದ ರಾತ್ರಿ 9.15 ಕ್ಕೆ ಹೊಗೆ ಕಾಣಿಸಿಕೊಂಡ ನಂತರ, ಅಧಿಕಾರಿಗಳು ವಿಮಾನದ ಸಿಬ್ಬಂದಿ ಮತ್ತು ತಾಂತ್ರಿಕ ತಜ್ಞರು ವಿಮಾನವನ್ನು ಪರಿಶೀಲಿಸಿದರು ಮತ್ತು ಅಗ್ನಿಶಾಮಕ ಸಿಬ್ಭಂದಿ ಬಂದು ಸುಮಾರು 10 ನಿಮಿಷ ಕಾರ್ಯಾಚರಣೆ ನಡೆಸಿದರು. ವಿಮಾನ ಹೊರಡುವ ಮುನ್ನ, ರೆಕ್ಕೆ ಭಾಗದಿಂದ ಹೊಗೆ ಹೊರಹೊಮ್ಮಿತು ಕೂಡಲೆ ವಿಮಾನ ನಿಲ್ಲಿಸಿ ತಪಾಸಣೆ ನಡೆಸಿ ಸುಮಾರು 4 ಗಂಟೆ ತಡವಾಗಿ 280 ಪ್ರಯಾಣಿಕರೊಂದಿಗೆ ವಿಮಾನವು 12.40 ಕ್ಕೆ ದುಬೈಗೆ ಹೊರಟಿದೆ.ಹೊಗೆಗೆ ಕಾರಣವನ್ನು ಅಧಿಕಾರಿಗಳು ತಕ್ಷಣ ಬಹಿರಂಗಪಡಿಸಿಲ್ಲ.

Also Read  ಪಾಕ್ ನುಸುಳುಕೋರನನ್ನು ಹೊಡೆದುರುಳಿಸಿದ ಭಾರತೀಯ ಸೇನೆ     

error: Content is protected !!
Scroll to Top