ಮಾರ್ ಇವಾನಿಯೋಸ್- ಬಿ.ಇಡಿ. ಪ್ರಶಿಕ್ಷಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟ

(ನ್ಯೂಸ್ ಕಡಬ) newskadaba.com ಕಡಬ, ಸೆ. 25. ಮಂಗಳೂರು ವಿಶ್ವ ವಿದ್ಯಾನಿಲಯದ ಬಿ.ಇಡಿ. ವಿಭಾಗದಲ್ಲಿ 2024ರ ಅಗಸ್ಟ್ ನಲ್ಲಿ ನಡೆದ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಿಂದ ಪರೀಕ್ಷೆಗೆ ಹಾಜರಾದ ಎಲ್ಲಾ ಪ್ರಶಿಕ್ಷಣಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ಎರಡು ಸೆಮಿಸ್ಟರ್‌ನಲ್ಲೂ ಶೇ.99 ಫಲಿತಾಂಶ ಬಂದಿದೆ. ಪ್ರಥಮ ಸೆಮಿಸ್ಟರ್‌ ನಲ್ಲಿ ಪರೀಕ್ಷೆಗೆ ಹಾಜರಾದ 38 ಪ್ರಶಿಕ್ಷಣಾರ್ಥಿಗಳಲ್ಲಿ 35 ಪ್ರಶಿಕ್ಷಣಾರ್ಥಿಗಳು ಅತಿ ವಿಶಿಷ್ಟ ಶ್ರೇಣಿಯಲ್ಲಿ ಮತ್ತು 2 ಪ್ರಶಿಕ್ಷಣಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಕು| ಪ್ರಿತಿಕಾ ಪಿ ಶೇ. 83.44 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು, ಕು|ಸರಿತಾ ಮರಿಟ ಗೋಮಸ್ ಶೇ. 89.17 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಮತ್ತು ಕು|ರಕ್ಷಾ ಕೆ ಎಂ ಶೇ. 89 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

Also Read  ಕಡಬ: ಪೊಲೀಸ್ ಕಾನ್ಸ್‌ಟೇಬಲ್ ಭವಿತ್ ರೈ ಹೆಡ್ ಕಾನ್ಸ್‌ಟೇಬಲ್ ಆಗಿ ಮುಂಭಡ್ತಿ

ತೃತೀಯ ಸೆಮಿಸ್ಟರ್‌ನಲ್ಲಿ ಪರೀಕ್ಷೆಗೆ ಹಾಜರಾದ 50 ಪ್ರಶಿಕ್ಷಣಾರ್ಥಿಗಳಲ್ಲಿ 47 ಪ್ರಶಿಕ್ಷಣಾರ್ಥಿಗಳು ಅತಿ ವಿಶಿಷ್ಟ ಶ್ರೇಣಿಯಲ್ಲಿ ಮತ್ತು 2 ಪ್ರಶಿಕ್ಷಣಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಕು| ಪ್ರಿಯಾ ಎಮ್. ಶೇ. 92.17 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು, ಕು| ತೇಜಸ್ವಿನಿ ಶೇ. 89.83 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಮತ್ತು ಕು| ದೀಕ್ಷಾ ಮ್ಯಾಥ್ಯು ಶೇ. 89.33 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

error: Content is protected !!