(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 25. ಭಾರತೀಯ ಜನತಾ ಪಕ್ಷದ ನಾಯಕಿ ಹಾಗೂ ಮಂಡಿ ಸಂಸದೆ ಕಂಗನಾ ರಣಾವತ್ ಅವರು ಮೂರು ಕೃಷಿ ಕಾನೂನುಗಳ ಸಂಬಂಧ ನೀಡಿದ ಹೇಳಿಕೆಯನ್ನು ಕೇಂದ್ರದಲ್ಲಿ ಆಡಳಿತಾರೂಢ ಪಕ್ಷವೇ ಅಲ್ಲಗಳೆದ್ದಿದೆ.
ರೈತರ ಪ್ರತಿಭಟನೆ ಬಳಿಕ ರದ್ದುಪಡಿಸಲಾದ ಮೂರು ಕೃಷಿ ಕಾನೂನುಗಳನ್ನು ಸರ್ಕಾರ ಮತ್ತೆ ಜಾರಿಗೆ ತರಬೇಕು ಎಂದು ಹೇಳಿಕೆ ನೀಡುವ ಮೂಲಕ ಕಂಗನಾ ರಣಾವತ್ ರೈತರ ಕೆಂಗಣ್ಣಿಗೆ ಗುರಿಯಾಗಿದ್ದರು. “ರೈತರು ಸ್ವತಃ ತಾವೇ ಈ ಬೇಡಿಕೆ ಮುಂದಿಡಬೇಕು” ಎಂದು ಕಂಗನಾ ಹೇಳಿದ್ದಾರೆ.
