ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತಿದ್ದ ಚಿರತೆ ಸೆರೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 25. ನಗರದ ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಿರತೆ ಬೋನಿಗೆ ಬಿದ್ದಿದ್ದು, ಕೆಲ ದಿನಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಮೊದಲನೇ ಹಂತದಲ್ಲಿ ಚಿರತೆ ಓಡಾಡಿಕೊಂಡಿತ್ತು. ರಸ್ತೆ ದಾಟಿ ಚಿರತೆ ಓಡಾಡುತ್ತಿರುವ ದೃಶ್ಯ ಸೆರೆಯಾಗಿತ್ತು.

ಇದು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಲಕ್ಷಾಂತರ ಮಂದಿ ಐಟಿ ಉದ್ಯೋಗಿಗಳು ಕೆಲಸ ಮಾಡುವ ಕೈಗಾರಿಕಾ ಪ್ರದೇಶವಾದ ಇಂತಹ ಕಡೆ ಚಿರತೆ ಓಡಾಟಕ್ಕೆ ಜನ ಬೆಚ್ಚಿಬಿದ್ದಿದ್ದರು. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಟ್ರ್ಯಾಪ್ ಮಾಡಿ ಮೂರು ಬೋನ್ ಗಳನ್ನ ಇಟ್ಟು ಚಿರತೆ ಸೆರೆ ಹಿಡಿದಿದ್ದಾರೆ.

Also Read  ಸಾವಿರಾರು ನೌಕರರನ್ನು ವಜಾ ಮಾಡಿದ ಮೈಕ್ರೋಸಾಫ್ಟ್ ಕಂಪನಿ

 

error: Content is protected !!