(ನ್ಯೂಸ್ ಕಡಬ) newskadaba.com ಬೆಂಗಳೂರು(ಸೆ.25): ಚಿನ್ನದ ಬೆಲೆಯ ಏರಿಕೆಯು ಮುಂದುವರೆದಿದೆ. ಷೇರುಮಾರುಕಟ್ಟೆ ಹೊಸ ದಾಖಲೆ ಎತ್ತರಕ್ಕೆ ಹೋದಂತೆ ಚಿನ್ನದ ಬೆಲೆಯೂ ಹೊಸ ಮೈಲಿಗಲ್ಲುಗಳನ್ನು ದಾಟುತ್ತಿದೆ. ಭಾರತದಲ್ಲಿ ಅಪರಂಜಿ ಚಿನ್ನ ಮೊದಲ ಬಾರಿಗೆ 7,700 ರೂ ಗಡಿ ದಾಟಿದೆ. ಬೆಳ್ಳಿ ಬೆಲೆ ಮುಂಬೈನಲ್ಲಿ ಕಡಿಮೆ ಆದರೂ ಚೆನ್ನೈ, ಕೇರಳ ಮೊದಲಾದೆಡೆ ಹೊಸ ಏರಿಕೆ ದಾಟಿದೆ. ಅಲ್ಲೆಲ್ಲಾ ಬೆಳ್ಳಿ ಬೆಲೆ ಗ್ರಾಮ್ಗೆ 100 ರೂ ಗಡಿ ದಾಟಿದೆ. ಬೆಂಗಳೂರಿನಲ್ಲಿ 87 ರೂ ಬೆಲೆ ಮುಂದುವರಿದಿದೆ. ಉಳಿದ ಕಡೆ 95 ರೂ ಬೆಲೆ ಇದೆ. ವಿದೇಶಗಳಲ್ಲಿ ಇಂದು ಬುಧವಾರ ಕೆಲವೆಡೆ ಚಿನ್ನದ ಬೆಲೆ ಏರಿದೆ, ಇನ್ನೂ ಕೆಲವೆಡೆ ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 70,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 77,020 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,280 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ಬೆಳ್ಳಿ ಬೆಲೆ 100 ಗ್ರಾಮ್ಗೆ 8,700 ರುಪಾಯಿಯಲ್ಲಿ ಇದೆ.