ಕೋಲಾರದಲ್ಲಿ ಆತಂಕಕಾರಿ ಸೂಟ್ ಕೇಸ್ ಪತ್ತೆ

 (ನ್ಯೂಸ್ ಕಡಬ) newskadaba.com ಕೋಲಾರ(ಸೆ.25): ಕೋಲಾರದ ಹೆದ್ದಾರಿ ಪಕ್ಕದಲ್ಲಿ ಕಂಡು ಬಂದ ಸೂಟ್‌ಕೇಸ್‌ವೊಂದು ಪತ್ತೆಯಾಗಿದೆ. ನಗರ ಹೊರವಲಯದಲ್ಲಿ ಸೂಟ್ ಕೇಸ್ ಕಂಡು ಬಂದಿದ್ದು, ಸೂಟ್‌ಕೇಸ್‌ನಿಂದ ಶಬ್ದ ಹೊರ ಬರುತ್ತಿದೆ. ಸ್ಫೋಟಕ ಇರುವ ಅನುಮಾನದ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕದಲ್ಲಿದ್ದಾರೆ. ಕ್ರೌನ್ ಕಂಪನಿಯ ಸೂಟ್‌ಕೇಸ್ ಇದಾಗಿದ್ದು, ಸೆನ್ಸಾರ್ ಇರುವ ಸೂಟ್‌ಕೇಸ್ ಆಗಿರುವ ಕಾರಣ ಶಬ್ದ ಬರುತ್ತಿದೆ ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಇದೀಗ ಬಾಂಬ್ ತಜ್ಞರು ಹಾಗೂ ಕೋಲಾರ ಎಸ್ಪಿ ನಿಖಿಲ್.ಬಿ ಭೇಟಿ ನೀಡಿದ್ದಾರೆ ಹಾಗೂ ಶ್ವಾನ ದಳ, ಗಲ್ ಪೇಟೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯೂ ಭೇಟಿ ನೀಡಿದ್ದಾರೆ. ಸೂಟ್‌ಕೇಸ್‌ನಿಂದ ಬರುತ್ತಿರುವ ಶಬ್ದದಿಂದ ಸ್ಥಳೀಯರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

Also Read  ಪ್ರೋತ್ಸಾಹಧನಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ…!        ➤  ಅರ್ಜಿ ಸಲ್ಲಿಕೆ ಅವಧಿ ಮಾ.15ರ ವರೆಗೆ ವಿಸ್ತರಣೆ

error: Content is protected !!
Scroll to Top