(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 24. ದೇಶದಲ್ಲಿ ಆಧಾರ್ ನಷ್ಟೇ ಇನ್ನೊಂದು ಪ್ರಮುಖ ಗುರುತಿನ ಚೀಟಿ ಎಂದರೆ ಅದು ಪ್ಯಾನ್ ಕಾರ್ಡ್. ಪರ್ಮನೆಂಟ್ ಅಕೌಂಟ್ ನಂಬರ್ ಅನ್ನು ದೇಶದಲ್ಲಿ ಇದುವರೆಗೆ ಕಡ್ಡಾಯಗೊಳಿಸದಿದ್ದರೂ ಆರ್ಥಿಕ ವ್ಯವಹಾರಗಳಿಗೆ ಅತ್ಯಗತ್ಯ ದಾಖಲೆ ಎನಿಸಿಕೊಂಡಿದೆ. ಆದಾಯ ತೆರಿಗೆ ಇಲಾಖೆ ನೀಡುವ 10 ಅಂಕಿಗಳ ವಿಶಿಷ್ಟ ಗುರುತಿನ ಚೀಟಿ ಮುಖ್ಯವಾಗುತ್ತದೆ. ಅದಾಗ್ಯೂ ನೀವು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ದರೆ ಭಾರಿ ದಂಡ ಪಾವತಿಸಬೇಕಾಗುತ್ತದೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವುದು ಗಮನಕ್ಕೆ ಬಂದರೆ ಅಂತವರ ವಿರುದ್ಧ ಆದಾಯ ತೆರಿಗೆ ಇಲಾಖೆಯು ಐಟಿ ಕಾಯ್ದೆ1961ರ ಸೆಕ್ಷನ್ 272 ಬಿ ಅಡಿಯಲ್ಲಿ10,000 ರೂ.ಗಳವರಗೆ ದಂಡ ವಿಧಿಸುತ್ತದೆ.