(ನ್ಯೂಸ್ ಕಡಬ) newskadaba.com ಸೆ. 24. ರಾಜ್ಯಕ್ಕೆ ಜಮ್ಮು-ಕಾಶ್ಮೀರದಿಂದ ಯೋಧರನ್ನು ಕರೆದೊಯ್ಯುತ್ತಿದ್ದ ರೈಲನ್ನು ಸ್ಫೋಟಿಸಲು ಸಂಚು ರೂಪಿಸಿ ಹಳಿಗಳುದ್ದಕ್ಕೂ ಸ್ಫೋಟಕ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೇ ಸಿಬ್ಬಂದಿಯೋರ್ವರನ್ನು ಪೊಲೀಸರು ಅರೆಸ್ಟ್ ಮಾಡಿರುವ ಕುರಿತು ವರದಿಯಾಗಿದೆ.
ಬಂಧಿತನನ್ನು ಶಬೀರ್ ಎಂದು ಗುರುತಿಸಲಾಗಿದ್ದು, ಈತ ಮಧ್ಯಪ್ರದೇಶದಲ್ಲಿ ರೈಲ್ವೇ ಹಳಿಗಳ ಮೇಲೆ 10 ಸ್ಫೋಟಕ ವಸ್ತುಗಳನ್ನು ಇಟ್ಟು, ರೈಲು ಸ್ಫೋಟಕ್ಕೆ ಸಂಚು ರೂಪಿಸಿದ್ದ. ಆದರೆ ಅದೃಷ್ಟವಶಾತ್ ರೈಲ್ವೆ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ ಎನ್ನಲಾಗಿದೆ.
ರೈಲ್ವೇ ಸಂರಕ್ಷಣಾ ಪಡೆ ಆರೋಪಿ ಶಬೀರ್‌ನನ್ನು ಬಂಧಿಸಿದ್ದು, ಪ್ರಸ್ತುತ ರೈಲ್ವೇ ಆಸ್ತಿ ಕಾನೂನು ಬಾಹಿರ ಸ್ವಾಧೀನ ಕಾಯ್ದೆಯಡಿ ತನಿಖೆ ನಡೆಸುತ್ತಿದೆ. ಇದಲ್ಲದೆ, ಆರೋಪಿಯ ಬಂಧನವನ್ನು ಸೆಂಟ್ರಲ್ ರೈಲ್ವೆ ಬಹಿರಂಗಪಡಿಸಿದೆ. ರೈಲ್ವೇ ಹಳಿಯಲ್ಲಿ ಡಿಟೋನೇಟರ್‌ಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಶಬೀರ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದೆ.