(ನ್ಯೂಸ್ ಕಡಬ) newskadaba.com ಸೆ. 24. ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಒಂದರ ಹಿಂದೆ ಒಂದು ಕಂಪನಿಗಳು ಸಂಕಷ್ಟಕ್ಕೆ ಸಿಲುಕುತ್ತಿರುವ ಮಧ್ಯೆ ಹೊಸ ಹೊಸ ಕಂಪನಿಗಳು ಸೃಷ್ಟಿಯಾಗುತ್ತಿದ್ದು, ಇದೀಗ ‘ಶಂಖ್ ಏರ್’ ಎಂಬ ಏರ್ ಲೈನ್ ಸಂಸ್ಥೆಗೆ ಕೇಂದ್ರ ವಿಮಾನಯಾನ ಸಚಿವಾಲಯವು ಅನುಮೋದನೆ ನೀಡಿದೆ.
ವಿಮಾನಯಾನ ಮಹಾ ನಿರ್ದೇಶನಾಲಯದಿಂದ (ಡಿಸಿಸಿಎ) ಒಪ್ಪಿಗೆ ಮುದ್ರೆ ಪಡೆದ ಬಳಿಕ ಶಂಖ್ ಏರ್ ವಿಮಾನ ಹಾರಾಟ ಕಾರ್ಯಾರಂಭಿಸಬಹುದು. ಶಂಖ್ ಏರ್ ಸಂಸ್ಥೆಗೆ ವಿಮಾನ ಹಾರಾಟ ನಡೆಸಲು ಮೂರು ವರ್ಷಗಳಿಗೆ ನಿರಾಕ್ಷೇಪಣ ಪತ್ರ ನೀಡಲಾಗಿದೆ. ಷರತ್ತಿನ ಮೇರೆಗೆ ನಾಗರಿಕ ವಿಮಾನಯಾನ ಸಚಿವಾಲಯದಿಂದ ಅನುಮೋದನೆಯ ಪತ್ರ ನೀಡಲಾಗಿದೆ.