ಕಡಬ ಬ್ಲಾಕ್ ಕಾಂಗ್ರೆಸ್ ಮಟ್ಟದ ಪದಾಧಿಕಾರಿಗಳ ನೇಮಕ: ಆದೇಶ ಪತ್ರ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಮಾ.09. ಕಡಬ ಬ್ಲಾಕ್ ಕಾಂಗ್ರೆಸ್ ಮಟ್ಟದ ಪದಾಧಿಕಾರಿಗಳ ನೇಮಕ, ಆದೇಶ ಪತ್ರ ಹಸ್ತಾಂತರ ಕಾರ್ಯಕ್ರಮವು ಗುರುವಾರದಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ ಅಧ್ಯಕ್ಷತೆಯಲ್ಲಿ ಕಡಬ ಒಕ್ಕಲಿಗ ಗೌಡ ಸಭಾಭವನದಲ್ಲಿ ನಡೆಯಿತು.

ದ.ಕ.ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಕಡಬ ಬ್ಲಾಕ್ ಉಸ್ತುವಾರಿ ನ್ಯಾಯವಾದಿ ಚಂದ್ರಶೇಖರ್ ಪೂಜಾರಿ ಪದಾಧಿಕಾರಿಗಳಿಗೆ ಅವರವರ ಹುದ್ಧೆಯ ಆದೇಶ ಪತ್ರ ವಿತರಿಸಿ, ಮಾತನಾಡಿ ಪಕ್ಷ ಸಂಘಟನೆ ಬಗ್ಗೆ ಮಾಹಿತಿ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಮಾತನಾಡಿ ಈಗಾಗಲೇ ಬ್ಲಾಕ್ ಮಟ್ಟದಲ್ಲಿ ಹಲವಾರು ಪದಾಧಿಕಾರಿಗಳಿಗೆ ವಿವಿಧ ಜವಬ್ದಾರಿಗಳನ್ನು ವಹಿಸಿದ್ದು ಇನ್ನೂ ಹಲವರಿಗೆ ಈಗಾಗಲೇ ವಿವಿಧ ಪದಾಧಿಕಾರಿಗಳನ್ನಾಗಿ ನೇಮಿಸಿ ಜವಬ್ದಾರಿ ಹಂಚಲಾಗುತ್ತಿದೆ, ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕಾಗಿದೆ ಎಂದರು. ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ ಬ್ಲಾಕ್ ಮಟ್ಟದ ಹಲವಾರು ಪದಾಧಿಕಾರಿಗಳನ್ನು ನೇಮಿಸುವುದರೊಂದಿಗೆ ವಲಯ ಮಟ್ಟದ ಪದಾಧಿಕಾರಿಗಳ ಆಯ್ಕೆಯೂ ನಡೆದಿದ್ದು ಅವರಿಗೂ ಜವಾಬ್ದಾರಿ ವಹಿಸಲಾಗಿದೆ. ಅಲ್ಲದೆ ಪ್ರತಿ ವಲಯ ಮಟ್ಟದ ಪ್ರಧಾನ ಕಾರ್ಯದರ್ಶಿ ನೇಮಿಸಿ ವಲಯ ಮಟ್ಟದ ಪದಾಧಿಕಾರಿಗಳ ಕಾರ್ಯಕರ್ತರ ಸಭೆಯನ್ನು ಕರೆಯುವ ಬಗ್ಗೆ ದಿನಾಂಕ ನಿಗಧಿಗೊಳಿಸಬೇಕೆಂದು ತಿಳಿಸಿದರು.

Also Read  ಇಂದಿನಿಂದ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಜಿಲ್ಲಾ ಪ್ರವಾಸ

ನೂತನವಾಗಿ ನೇಮಕಗೊಂಡಿರುವ ಕಡಬ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯ್ ಅಬ್ರಾಂರವರು ಮಾತನಾಡಿ ಚುನಾವಣೆ ಸಮಿಪಿಸುತ್ತಿರುವುದರಿಂದ ನಾಳೆಯೇ ಬ್ಲಾಕ್ ಮಟ್ಟದ ಪ್ರಚಾರ ಸಮಿತಿಯ ಪದಾಧಿಕಾರಿಗಳನ್ನು ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಿ ಪಕ್ಷ ಸಂಘಟನೆಗೆ ಶಕ್ತಿ ತುಂಬಲಾಗುವುದು ಎಂದರು. ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ಕೆ.ಪಿ.ಸಿ.ಸಿ ಸದಸ್ಯ ಕೆ.ಪಿ.ತೋಮಸ್, ಜಿಲ್ಲಾ ಕೆಡಿಪಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ, ಮಾಜಿ ಜಿ.ಪಂ.ಸದಸ್ಯರಾದ ಶಿವಣ್ಣ ಗೌಡ ಇಡ್ಯಾಡಿ, ಕುಮಾರಿ ವಾಸುದೇವನ್, ತಾ.ಪಂ.ಸದಸ್ಯರಾದ ಫಝಲ್ ಕೊಡಿಂಬಾಳ, ಆಶಾ ಲಕ್ಷ್ಮಣ್ ಗುಂಡ್ಯ, ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಜಿ ಅಬ್ದುಲ್ ನಾಸಿರ್ ಹೊಸಮನೆ, ಎಸ್.ಸಿ/ಎಸ್.ಟಿ.ಘಟಕದ ಅಧ್ಯಕ್ಷ ಶಶಿಧರ ಬೊಟ್ಟಡ್ಕ, ಡಿಸಿಸಿ ಕಾರ್ಯದರ್ಶಿಗಳಾದ ಎಚ್.ಕೆ.ಇಲ್ಯಾಸ್, ಸೈಮನ್ ಸಿ.ಜೆ., ಸದಸ್ಯರಾದ ಎ.ಎಸ್.ಶರೀಫ್, ನೀಲಾವತಿ ಶಿವರಾಮ್, ಸೂಸಮ್ಮ ತೋಮಸ್, ಬ್ಲಾಕ್ ಕಾರ್ಯದರ್ಶಿ ಶಾಲಿನಿ ಸತೀಶ್, ಮುಂತಾದವರು ಮಾತನಾಡಿ ಪಕ್ಷ ಸಂಘಟನೆ ಬಗ್ಗೆ ಸಲಹೆ ಸೂಚನೆ ನೀಡಿದರು. ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಟಿ.ಎಂ.ಮಥ್ಯು ಕುಟ್ರುಪ್ಪಾಡಿ, ಶಿವರಾಮ್ ಎಂ.ಎಸ್, ಪುರಂಧರ ರೈ ಕೊಲ, ಅಝೀಜ್ ಗೊಳಿತೊಟ್ಟು, ಗಂಗಾಧರ ಶೆಟ್ಟಿ ನೆಲ್ಯಾಡಿ, ಅನಿಲ್ ವರ್ಗೀಸ್ ಉಳಿಪ್ಪು, ತನಿಯಪ್ಪ ಸಂಪಡ್ಕ, ಜಾರ್ಜ್‌ ಕುಟ್ಟಿ ಉಪದೇಶಿ, ಅಬ್ರಾಹಂ ವರ್ಗೀಸ್ ಇಚಿಲಂಪಾಡಿ, ನ್ಯಾಯವಾದಿ ಲೋಕೆಶ್ ಮಾಲ, ಎಂ.ಪಿ.ಯುಸುಫ್, ಇಸ್ಮಾಯಿಲ್ ಎಂ.ಎಚ್., ಕಡಬ ವಲಯ ಕಾಂಗ್ರೆಸ್ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಬಿಳಿನೆಲೆ ವಲಯ ಅಧ್ಯಕ್ಷ ರಾಮಕೃಷ್ಣ ಹೊಳ್ಳಾರು, ಮಾದವ ಪೂಜಾರಿ, ವಿಶ್ವನಾಥ ಪೂಜಾರಿ, ಸತೀಶ್ ನಾಕ್ ಮೇಲಿನಮನೆ, ಚಂದ್ರಶೇಖರ ಕರ್ಕೇರ, ಶಬ್ಬೀರ್ ನೆಲ್ಯಾಡಿ, ಕುಂಞಿರಾಮನ್ ಮೀನಾಡಿ ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು.

Also Read  ಬಾಯಿಯ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಿ- ಡಾ. ಚೂಂತಾರು

ಈ ಸಂದರ್ಭದಲ್ಲಿ ನೆಲ್ಯಾಡಿ ವಲಯ ಅಧ್ಯಕ್ಷರಾಗಿ ನೇಮಕಗೊಂಡ ಜಯಾನಂದ ಬಂಟ್ರಿಯಾಲ್,ಕಡಬ ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿಯಾಗಿ ವಿ.ಎಂ.ಕುರಿಯನ್, ಪ್ರಧಾನ ಕಾರ್ಯದರ್ಶಿಯಾಗಿ ಡೆನಿಸ್ ಫೆರ್ನಾಂಡಿಸ್, ಸುಲೈಮಾನ್ ಕೊಯಿಲ, ಕಾರ್ಯದರ್ಶಿಗಳಾಗಿ ಆಯ್ಕೆಗೊಂಡ ಮಹಮ್ಮದಾಲಿ ಹೊಸ್ಮಠ, ಗೋಪಾಲಕೃಷ್ಣ ಜಾಲು, ಅಬ್ರಹಾಂ ನೆಲ್ಯಾಡಿ, ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡ ಪಿ.ಯು.ಸ್ಕರಿಯ, ಸುಕೇಶ್ ಬಿಳಿನೆಲೆ, ಕುಶಾಲಪ್ಪ ಗೌಡ ಬಿಳಿನೆಲೆ ಸೇರಿದಂತೆ ಹಲವರಿಗೆ ಆದೇಶ ಪತ್ರವನ್ನು ಸಭೆಯಲ್ಲಿ ನೀಡಲಾಯಿತು.

error: Content is protected !!
Scroll to Top