ಸೆ.​ 30ರೊಳಗೆ ಆಸ್ತಿ ಘೋಷಿಸದಿದ್ದರೆ ಸಂಬಳವಿಲ್ಲ- ರಾಜ್ಯ ಸರ್ಕಾರ ಆದೇಶ

(ನ್ಯೂಸ್ ಕಡಬ) newskadaba.com ಸೆ. 24. ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ತನ್ನ ಉದ್ಯೋಗಿಗಳಿಗೆ ಸೆಪ್ಟೆಂಬರ್ 30ರೊಳಗೆ ತಮ್ಮ ಚರ ಹಾಗೂ ಸ್ಥಿರ ಆಸ್ತಿಗಳನ್ನು ಬಹಿರಂಗಪಡಿಸದಿದ್ದರೆ ಸಂಬಳ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆದೇಶವನ್ನು ಪಾಲಿಸುತ್ತಿರುವ ನೌಕರರನ್ನು ಸಕಾಲದಲ್ಲಿ ಪರಿಶೀಲಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರವು ಡ್ರಾಯಿಂಗ್ ಮತ್ತು ಡಿಸ್ಬರ್ಸಿಂಗ್ ಅಧಿಕಾರಿ (ಡಿಡಿಒ) ಅವರಿಗೆ ವಹಿಸಿದೆ. ಪೋರ್ಟಲ್‌ ನಲ್ಲಿ ತಮ್ಮ ಆಸ್ತಿ ವಿವರಗಳನ್ನು ಒದಗಿಸುವ ಉದ್ಯೋಗಿಗಳಿಗೆ ಮಾತ್ರ ಸೆಪ್ಟೆಂಬರ್ ಸಂಬಳವನ್ನು ನೀಡಲಾಗುತ್ತದೆ. ಕೆಲವು ನೌಕರರು ಹೆಚ್ಚಿನ ಸಮಯ ಕೋರಿದ ನಂತರ  ಸರ್ಕಾರ ಸೆಪ್ಟೆಂಬರ್ 30 ರವರೆಗೆ ಗಡುವನ್ನು ವಿಸ್ತರಿಸಿತು.

Also Read  ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು ಇಂದೇ ರೆಸಾರ್ಟ್ ಗೆ

 

error: Content is protected !!
Scroll to Top