Railway Recruitment- 11,558 ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಸೆ. 24. ಪದವಿ ಹಾಗು ದ್ವಿತೀಯ ಪಿಯುಸಿ ಮುಗಿಸಿ  ಉದ್ಯೋಗಕ್ಕಾಗಿ ಹುಡುಕಾಟ ನಡೆಸುವವರಿಗೆ ಭಾರತೀಯ ರೈಲ್ವೆ ಇಲಾಖೆಯು ಅತ್ಯುತ್ತಮ ಅವಕಾಶ ನೀಡುತ್ತಿದ್ದು, ಭಾರತದಾದ್ಯಂತ ರೈಲ್ವೇ ರಿಕ್ರೂಟ್‌ಮೆಂಟ್‌ ಬೋರ್ಡ್‌ ಖಾಲಿ ಇರುವ ಬರೋಬ್ಬರಿ 11,558 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ.

ಸ್ಟೇಷನ್‌ ಮಾಸ್ಟರ್‌, ಕ್ಲರ್ಕ್‌ ಹುದ್ದೆ ಇದಾಗಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಅಕ್ಟೋಬರ್‌ 20. ಗೂಡ್ಸ್ ಟ್ರೈನ್ ಮ್ಯಾನೇಜರ್, ಸ್ಟೇಷನ್ ಮಾಸ್ಟರ್, ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕ, ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳಿಗೆ ಸೆಪ್ಟೆಂಬರ್‌ 14ರಂದು ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಕೌಂಟ್ಸ್ ಕ್ಲರ್ಕ್ ಮತ್ತು ಟೈಪಿಸ್ಟ್, ಕಮರ್ಷಿಯಲ್ ಮತ್ತು ಟಿಕೆಟ್ ಕ್ಲರ್ಕ್, ಜೂನಿಯರ್ ಕ್ಲರ್ಕ್ ಮತ್ತು ಟೈಪಿಸ್ಟ್ ಹಾಗೂ ರೈಲ್ವೆ ಕ್ಲರ್ಕ್ ಹುದ್ದೆಗಳಿಗೆ ಸೆಪ್ಟೆಂಬರ್‌ 21ರಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ.

Also Read  ​ಬ್ಯಾಂಕ್ ಆಫ್ ಬರೋಡಾ- ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ಸಚಿನ್ ತೆಂಡೂಲ್ಕರ್ ಆಯ್ಕೆ

 

ಅರ್ಜಿ ಶುಲ್ಕ:

ಅರ್ಜಿ ಶುಲ್ಕವಾಗಿ ಎಸ್‌ಸಿ / ಎಸ್‌ಟಿ/ ಮಾಜಿ ಯೋಧರು / ಇಬಿಎಸ್‌ / ಪಿಡಬ್ಲ್ಯುಬಿಡಿ / ಮಹಿಳೆಯರು / ಅಲ್ಪ ಸಂಖ್ಯಾತರು / ತೃತೀಯ ಲಿಂಗಿಗಳು 250 ರೂ. ಮತ್ತು ಉಳಿದ ಅಭ್ಯರ್ಥಿಗಳು 500 ರೂ. ಪಾವತಿಸಬೇಕು.

ವಯೋಮಿತಿ ಮತ್ತು ಆಯ್ಕೆ ವಿಧಾನ:

18ರಿಂದ 36 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಬಹುದು.

error: Content is protected !!
Scroll to Top