(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.08. ನೆಲ್ಯಾಡಿ ವಿದ್ಯುತ್ ಸಬ್ ಸ್ಟೇಷನ್ ನಿಂದ ಪೂರೈಕೆಯಾಗುವ ವಿದ್ಯುತ್ ಲೋ ವೋಲ್ಟೇಜ್ ನಿಂದ ಕೂಡಿದೆ ಹಾಗೂ ಅನಿಯಮಿತ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಸುಳ್ಯ ಮಂಡಲದ ವತಿಯಿಂದ ನೆಲ್ಯಾಡಿ ಗ್ರಾಮದ ಮಾದೇರಿಯಲ್ಲಿರುವ ಸಬ್ ಸ್ಟೇಷನ್ ಎದುರು ಗುರುವಾರ ಸಂಜೆ ಪ್ರತಿಭಟನೆ ನಡೆಯಿತು. ವಿದ್ಯುತ್ ಸಮಸ್ಯೆ ಬಗ್ಗೆ ಜೆ.ಇ.ಯವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ವಾರದೊಳಗೆ ವಿದ್ಯುತ್ ಸಮಸ್ಯೆ ಸರಿಪಡಿಸದೇ ಇದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದಶರ್ಿ ಕಿಶೋರ್ ಶಿರಾಡಿ ಮಾತನಾಡಿ, ರಾಜ್ಯದಲ್ಲಿ ಗೂಂಡಾ ಸಂಸ್ಕೃತಿಯ ಸರಕಾರವಿದೆ. ವಿದ್ಯುತ್ ಸಮಸ್ಯೆ ಬಗ್ಗೆ ಸಚಿವರಿಗೆ ದೂರವಾಣಿ ಮಾಡಿ ತಿಳಿಸಿದಲ್ಲಿ ಅರ್ಧತಾಸಿನೊಳಗೆ ಬಂಧಿಸಲಾಗುತ್ತಿದೆ. ಇಂತಹ ಸಚಿವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಆದ್ದರಿಂದ ನಮ್ಮ ಬೇಡಿಕೆಯನ್ನು ಮನವಿಗೆ ಸೀಮಿತಗೊಳಿಸದೇ ಜನಜಾಗೃತಿಗೊಳಿಸಬೇಕಾಗಿದೆ ಎಂದರು. ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದ ವೇಳೆ ತ್ರಿಫೇಸ್ ವಿದ್ಯುತ್ ನಿರಂತರ ಪೂರೈಕೆಯಾಗುತ್ತಿತ್ತು. ಲೋಡ್ಶೆಡ್ಡಿಂಗ್, ಟ್ರಿಫಿಂಗ್ ಸಮಸ್ಯೆ ಇರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ವಿದ್ಯುತ್ ಸಮಸ್ಯೆ ಆರಂಭಗೊಂಡಿದೆ. ನಗರದ ದೊಡ್ಡ ದೊಡ್ಡ ಫ್ಯಾಕ್ಟರಿಗಳಿಗೆ ಕದ್ದು ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇದರಲ್ಲಿ ಅಧಿಕಾರಿಗಳೂ ಶಾಮೀಲಾಗುತ್ತಿದ್ದು ಇದಕ್ಕೆ ಇಂಧನ ಸಚಿವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ ಕಿಶೋರ್ ಶಿರಾಡಿ, ಬೆಳ್ತಂಗಡಿ,ಪುತ್ತೂರು ಕ್ಷೇತ್ರಗಳಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡಿ, ಸುಳ್ಯ ಕ್ಷೇತ್ರಕ್ಕೆ ತಾರತಮ್ಯ ಮಾಡುವ ಸರಕಾರದ ವಿರುದ್ಧ ಹೋರಾಟ ನಡೆಸುವ ಮೂಲಕ ಭಾರತೀಯ ಜನತಾ ಪಾಟರ್ಿ ಎಲ್ಲಾ ಜನರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಎಪಿಎಂಸಿ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು ಮಾತನಾಡಿ, ಪುತ್ತೂರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿದೆ. ಆದರೆ ಬಿಜೆಪಿ ಶಾಸಕರಿರುವ ಸುಳ್ಯ ಕ್ಷೇತ್ರದ ವ್ಯಾಪ್ತಿಯಲ್ಲಿ ಅನಿಯಮಿತ ವಿದ್ಯುತ್ ಕಡಿತಗೊಳಿಸುವುದರ ಮೂಲಕ ತಾರತಮ್ಯ ಮಾಡಲಾಗುತ್ತಿದೆ. ಇದೊಂದು ಸುಳ್ಯ ಕ್ಷೇತ್ರದ ರೈತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅನ್ಯಾಯದ ಕೊಡುಗೆಯಾಗಿದೆ ಎಂದು ಟೀಕಿಸಿದರು. ದಿನದಲ್ಲಿ 6 ಗಂಟೆ ತ್ರಿಫೇಸ್ ವಿದ್ಯುತ್ ಕೊಡಬೇಕಿತ್ತು. ಆದರೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. 5 ನಿಮಿಷ ವಿದ್ಯುತ್ ನೀಡಿ, 10 ನಿಮಿಷ ಪವರ್ಕಟ್ ಮಾಡಲಾಗುತ್ತಿದೆ. ಕೃಷಿಕರಿಗೆ 12 ಗಂಟೆ ನಿರಂತರ ತ್ರಿಫೇಸ್ ವಿದ್ಯುತ್ ಕೊಡಬೇಕು. ಈಗಿನ ವಿದ್ಯುತ್ ಸಮಸ್ಯೆ ಸರಿಪಡಿಸದೇ ಇದ್ದಲ್ಲಿ ಮುಂದೆ ಸಬ್ಸ್ಟೇಷನ್ಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತವಿದ್ದ ವೇಳೆ ವಿದ್ಯುತ್ ಸಮಸ್ಯೆ ಇರಲಿಲ್ಲ. ಸಮರ್ಪಕ ವಿದ್ಯುತ್ ಸಿಗುತ್ತಿತ್ತು. ಈಗ ಅದೇ ತಂತಿ, ಅದೇ ವಯರ್ ಇದ್ದರೂ ವೋಲ್ಟೇಜ್ ಸಮಸ್ಯೆ ಕಾಡುತ್ತಿದೆ. ಬೆಳ್ತಂಗಡಿ, ಪುತ್ತೂರಿನಲ್ಲಿ 12 ಗಂಟೆ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದೆ. ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿರುವುದರಿಂದ ತಾರತಮ್ಯ ಮಾಡಲಾಗುತ್ತಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸರಿಪಡಿಸಬೇಕು. ನಿರಂತರ ವಿದ್ಯುತ್ ನೀಡುತ್ತಿದ್ದೇವೆ ಎಂದು ಇಂಧನ ಸಚಿವರು ಟಿವಿಗಳಲ್ಲಿ ಜಾಹೀರಾತು ನೀಡುತ್ತಿದ್ದಾರೆ. ಇಂಧನ ಸಚಿವರು ಇಲ್ಲಿಗೆ ಬಂದು ಇಲ್ಲಿನ ವಿದ್ಯುತ್ ಸಮಸ್ಯೆ ಬಗ್ಗೆ ವೀಕ್ಷಣೆ ಮಾಡಲಿ, ಇಲ್ಲಿನ ಜನರ ಭಾವನೆ ಅರ್ಥಮಾಡಿಕೊಳ್ಳಲಿ ಎಂದು ಹೇಳಿದ ಅವರು ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಸರಿಪಡಿಸದೇ ಇದ್ದಲ್ಲಿ ಮುಂದಿನ ಅನಾಹುತಗಳಿಗೆ ಸರಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು.
ತಾ.ಪಂ.ಸದಸ್ಯೆ ತೇಜಸ್ವಿನಿಶೇಖರ ಗೌಡ ಕಟ್ಟಪುಣಿ ಮಾತನಾಡಿ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಶೋಭಾ ಕರಂದ್ಲಾಜೆ ಇಂಧನ ಸಚಿವರಾಗಿದ್ದ ವೇಳೆ ರಾಜ್ಯದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿತ್ತು. ಈಗ ಮಾತ್ರ ಯಾಕೆ ವಿದ್ಯುತ್ ಸಮಸ್ಯೆ ಉಂಟಾಗಿದೆ. ಫ್ಯಾಕ್ಟರಿ, ಪೇಟೆಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿದೆ. ಆದರೆ ದೇಶದ ಬೆನ್ನೆಲುಬು ಆಗಿರುವ ರೈತರಿಗೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ಇಂಧನ ಸಚಿವರು ಇಲ್ಲಿಗೆ ಬಂದು ಒಂದು ದಿನ ರೈತರ ಮನೆಯಯಲ್ಲಿ ವಾಸ್ತವ್ಯ ಹೂಡಿ ಅವರ ಕಷ್ಟಗಳನ್ನು ತಿಳಿದುಕೊಳ್ಳಲಿ. ನಂ.1ಸಚಿವರೆಂದು ಬಿಂಬಿಸಿಕೊಳ್ಳುತ್ತಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ರವರಿಗೆ ನಾಚಿಕೆಯಾಗಬೇಕೆಂದು ಹೇಳಿದರು. ಮಕ್ಕಳಿಗೆ ಪರೀಕ್ಷೆ ಸಮಯವೂ ಆಗಿರುವುದರಿಂದ ಓದಲು ತೊಂದರೆಯಾಗುತ್ತಿದೆ. ದೀಪವಿಟ್ಟು ಓದಲು ಸೀಮೆಎಣ್ಣೆಯೇ ಕೊಡುವುದಿಲ್ಲ. ರೈತರ ಬಾಳಲ್ಲಿ, ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ರಾಜ್ಯ ಸರಕಾರಕ್ಕೆ ದಿಕ್ಕಾರವಿರಲಿಲ್ಲ. ವಿದ್ಯುತ್ ಸಮಸ್ಯೆ ಬಗ್ಗೆ ಅಧಿಕಾರಿಗಳೂ ಉಡಾಫೆಯಾಗಿ ಉತ್ತರಿಸುತ್ತಾರೆ. ಮೆಸ್ಕಾಂ ಕಚೇರಿಯಲ್ಲಿ ಯಾರೂ ಇಲ್ಲದಿದ್ದರೂ ಅವರ ಕಚೇರಿಯಲ್ಲಿರುವ ಫ್ಯಾನ್, ಲೈಟ್ ನಿರಂತರ ಉರಿಯುತ್ತಿದೆ. ಈ ಭಾಗದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆ ಸರಿಪಡಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ನೆಲ್ಯಾಡಿ ಗ್ರಾಮ ಸಮಿತಿ ಅಧ್ಯಕ್ಷ ರವಿಚಂದ್ರ ಹೊಸವೊಕ್ಲು ಮಾತನಾಡಿ, ರಾಜ್ಯ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ರೈತರಿಗೆ 24 ಗಂಟೆಯೂ ಸಮರ್ಪಕ ವಿದ್ಯುತ್ ನೀಡುತ್ತೇವೆ ಎಂದು ಆಶ್ವಾಸನೆ ನೀಡಿತ್ತು. ಆದರೆ ಈ ಭಾಗಕ್ಕೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದೇ ರೈತರಿಗೆ ಮೋಸಮಾಡಿದೆ. ಸರಕಾರದ ಈ ಧೋರಣೆ ವಿರುದ್ಧ ತೀವ್ರ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು. ತಾ.ಪಂ.ಮಾಜಿ ಸದಸ್ಯ ಭಾಸ್ಕರ ಗೌಡ ಇಚ್ಲಂಪಾಡಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ, ನೆಲ್ಯಾಡಿ ಗ್ರಾ.ಪಂ.ಸದಸ್ಯರುಗಳಾದ ತೀಥರ್ೇಶ್ವರ ಉಮರ್ಾನು, ವಿನೋದರ, ಮಾಜಿ ಸದಸ್ಯ ಸುಂದರ ಗೌಡ ಅತ್ರಿಜಾಲು, ಕೌಕ್ರಾಡಿ ಗ್ರಾ.ಪಂ.ಸದಸ್ಯ ಲೋಕೇಶ್ ಬಾಣಜಾಲು, ಹಿಂದೂ ಜಾಗರಣ ವೇದಿಕೆ ಮುಖಂಡ ರವಿಪ್ರಸಾದ್ ಶೆಟ್ಟಿ, ಎಪಿಎಂಸಿ ನಿದರ್ೇಶಕ ಕುಶಾಲಪ್ಪ ಗೌಡ ಅನಿಲ, ಪ್ರಮುಖರಾದ ಗಣೇಶ್ ಪೊಸೊಳಿಗೆ, ಸುರೇಶ್ ಪಡಿಪಂಡ, ರಮೇಶ್ ಶೆಟ್ಟಿಬೀದಿಮನೆ, ಸತೀಶ್ಚಂದ್ರ ಅತ್ರಿಜಾಲು, ಲೋಹಿತ್ ಉದನೆ, ಪದ್ಮನಾಭ ಸಂಪ್ಯಾಡಿ, ರತ್ನಾಕರ ಪುಚ್ಚೇರಿ, ಬಾಲಕೃಷ್ಣ ಪುಚ್ಚೇರಿ, ನಾಗೇಶ್ ನಳಿಯಾರ್, ಕೇಶವ ಕುಡ್ತಾಜೆ, ಗಂಗಾಧರ ಪುಚ್ಚೇರಿ, ಚೆನ್ನಕೇಶವ ಕುಡ್ತಾಜೆ, ಸೋಮಶೇಖರ ಸಂಪ್ಯಾಡಿ, ಕಮಲಾಕ್ಷ ಬರಮೇಲು, ವೆಂಕಪ್ಪ ಕುಂಬಾರ ಕೊಪ್ಪ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.