(ನ್ಯೂಸ್ ಕಡಬ) newskadaba.com ಸೆ. 24. ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರ ಮತ್ತು ಆಲ್ ತ್ರಿಪುರಾ ಟೈಗರ್ ಫೋರ್ಸ್ ಗೆ ಸೇರಿದವರೆನ್ನಲಾದ ತ್ರಿಪುರಾದ ಸುಮಾರು 400 ಉಗ್ರರು ಮುಖ್ಯಮಂತ್ರಿ ಮಾಣಿಕ್ ಸಹಾ ಅವರ ಮುಂದೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಲಿದ್ದಾರೆ ಎಂದು ವರದಿಯಾಗಿದೆ.
ಈ ಎರಡು ಸಂಘಟನೆಗಳು ಸುಮಾರು 400 ಉಗ್ರಗಾಮಿಗಳು ಜಂಪೂಯಿಜಾಲಾದಲ್ಲಿರುವ ತ್ರಿಪುರಾ ಸ್ಟೇಟ್ ರೈಫಲ್ಸ್ ನ 7 ನೇ ಬೆಟಾಲಿಯನ್‌ನ ಪ್ರಧಾನ ಕಛೇರಿಯಲ್ಲಿ ಸಿಎಂ ಮುಂದೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಲಿದ್ದಾರೆ ಎಂದು ಗೃಹ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.