(ನ್ಯೂಸ್ ಕಡಬ) newskadaba.com ಕಡಬ, ಸೆ. 23. ಮರ ವ್ಯಾಪಾರಾಸ್ಥರಿಗೆ ಆಗುವ ತೊಂದರೆ ಹಾಗೂ ಬೇರೆ ರಾಜ್ಯಗಳ ವ್ಯಾಪಾರಿಗಳ ದಬ್ಬಾಳಿಕೆಯನ್ನು ಎದುರಿಸುವ ಸಲುವಾಗಿ ಕಡಬದಲ್ಲಿ ತಾಲೂಕು ಮಟ್ಟದ ಮರ ವ್ಯಾಪಾರಸ್ಥರ ಸಂಘ ರಚನೆಗೊಂಡಿದ್ದು, ಇದರ ಮೊದಲ ಸಭೆಯು ಸೆಪ್ಟೆಂಬರ್ 20ರಂದು ಕಡಬ ಒಕ್ಕಲಿಗರ ಸಭಾಭವನದಲ್ಲಿ ನಡೆಯಿತು.
ಜಿಎಸ್ಟಿ ಮುಖಾಂತರ ತೆರಿಗೆ ಪಾವತಿ ಮಾಡುತ್ತಿದ್ದರೂ ಮರ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಸಾಂಘಿಕ ಹೋರಾಟದ ಮೂಲಕ ಪರಿಹರಿಸುವ ನಿಟ್ಟಿನಲ್ಲಿ ಈ ಸಂಘ ಕೆಲಸ ನಿರ್ವಹಿಸಲಿದೆ. ಕೆ.ಕೆ.ಅಬೂಬಕ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಒಮ್ಮತ ಅಭಿಪ್ರಾಯ ಪಡೆದು ತಾಲೂಕು ಮಟ್ಟದ ಮರ ವ್ಯಾಪಾರಸ್ಥರ ಸಮಿತಿಯನ್ನು ರಚಿಸಲಾಯಿತು.
ಸಮಿತಿಯ ಮೊದಲ ಗೌರವಾಧ್ಯಕ್ಷರಾಗಿ ಖಾದರ್ ಹಾಜಿ ಸುಂಕದಕಟ್ಟೆ, ಅಧ್ಯಕ್ಷರಾಗಿ ಕೆ.ಕೆ.ಅಬೂಬಕ್ಕರ್ ಹಾಜಿಯವರನ್ನು ನೇಮಿಸಲಾಯಿತು. ಉಪಾಧ್ಯಕ್ಷರಾಗಿ ಉಮೇಶ್ ಮಡ್ಯಡ್ಕ, ಇಸ್ಮಾಯಿಲ್ ಕಳಾರ, ಪ್ರಧಾನ ಕಾರ್ಯದರ್ಶಿಯಾಗಿ ಇರ್ಷಾದ್ ಕಡಬ, ಜೊತೆ ಕಾರ್ಯದರ್ಶಿಯಾಗಿ ಕೆ.ಇ ಮುಹಮ್ಮದ್ ರಫೀಕ್ ಕೋಲ್ಪೆ, ಶಾಕಿರ್ ತಿಮರಡ್ಡ, ಕೋಶಾಧಿಕಾರಿಯಾಗಿ ಅಶ್ರಫ್ ಮರ್ಧಾಳ, ಗೌರವ ಸಲಹೆಗಾರರಾಗಿ ರಝಾಕ್ ಕೋಡಿಂಬಾಳ, ಸರ್ಪುದ್ದೀನ್ ಸುಂಕದಕಟ್ಟೆ, ರಝಾಕ್ ನೆಲ್ಯಾಡಿ, ಬಶೀರ್ ಮರ್ದಾಳ, ಅಶ್ರಫ್ ನಾಗಮಾರ್, ಕೆ.ಎಂ ಮುಹಮ್ಮದ್ ನೆಲ್ಯಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಉಮ್ಮರ್ ಕುಂತೂರು, ಮಾದ್ಯಮ ಕಾರ್ಯದರ್ಶಿಯಾಗಿ ಜಾಬೀರ್ ಕಳಾರ ಹಾಗೂ ಸದಸ್ಯರಾಗಿ ಅನ್ಸಾರ್ ಕಳಾರ, ಅಶ್ರಫ್ ತಿಮರಡ್ಡ, ಬಶೀರ್ ಕಡಬ, ಮುಹಮ್ಮದ್ ಅಶ್ರಫ್ ಕಡಬ, ಹನೀಫ್ ಬೆಳಂದೂರು, ಹಾರಿಸ್ ತಿಮರಡ್ಡ, ಯಾಕೂಬ್ ಬೆಳಂದೂರು, ಯೂಸುಫ್ ನೆಲ್ಯಾಡಿ, ದಾವೂದ್ ಕಳಾರ ನಾಸಿರ್ ಸವಣೂರು, ಅಶ್ರಫ್ ಕಳಾರ, ಸಮದ್ ಕಡಬ, ಖಾದರ್ ಕಡಬ ಇವರನ್ನು ಆಯ್ಕೆ ಮಾಡಲಾಯಿತು.