EY ಉದ್ಯೋಗಿ ಸಾವು: ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆ ಕಲಿಸುವಂತೆ- ನಿರ್ಮಲಾ ಸೀತಾರಾಮನ್

(ನ್ಯೂಸ್ ಕಡಬ) newskadaba.com ಚೆನ್ನೈ ಸೆ.23: ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆ ಪಾಠಗಳನ್ನು ಬೋಧಿಸುವಂತೆ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಲೇಜು ಮತ್ತು ವಿವಿಗಳಿಗೆ ಕರೆ ನೀಡಿದ್ದಾರೆ. ಇದು ವಿದ್ಯಾರ್ಥಿಗಳ ಆಂತರಿಕ ಬಲವನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ. ಪುಣೆಯ ಅರ್ನಸ್ಟ್ ಆ್ಯಂಡ್ ಯಂಗ್ (EY) ಕಂಪನಿಯ ಲೆಕ್ಕ ಪರಿಶೋಧಕಿ ಅನ್ನಾ ಸೆಬಾಸ್ಟಿನ್ ಪೆರಾಯ (26) ಅವರ ಸಾವಿನ ಹಿನ್ನೆಲೆಯಲ್ಲಿ ಸೀತಾರಾಮನ್ ಅವರ ಈ ಹೇಳಿಕೆ ಹೊರಬಿದ್ದಿದೆ. 2023ರಲ್ಲಿ ಸಿಎ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದ ಆಕೆ ನಾಲ್ಕು ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದು ಕೆಲಸದ ಒತ್ತಡ ಮತ್ತು ದೀರ್ಘ ಕೆಲಸದ ಅವಧಿಯು ತನ್ನ ಪುತ್ರಿಯ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಿತ್ತು ಮತ್ತು ಅಂತಿಮವಾಗಿ ಆಕೆಯ ಜೀವವನ್ನುವನ್ನು ಬಲಿ ತೆಗೆದುಕೊಂಡಿದೆ ಎಂದು ಆಕೆಯ ತಾಯಿ EY ಇಂಡಿಯಾದ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದರು.

ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಕ್ಯಾಂಪಸ್ ನೇಮಕಾತಿಗಳ ಮೂಲಕ ಅವರಿಗೆ ಉದ್ಯೋಗಗಳನ್ನು ಖಾತ್ರಿಪಡಿಸಿದರೂ,ಅವುಗಳ ಜೊತೆ ಕುಟುಂಬದಲ್ಲಿ ಕಲಿಸುವ ಇತರ  ಕೆಲವು ವಿಷಯಗಳನ್ನೂ ಅವರಿಗೆ ಬೋಧಿಸಬೇಕು. ನೀವು ಏನೇ ಕಲಿಯುತ್ತಿದ್ದರೂ,ಏನೇ ಉದ್ಯೋಗ ಮಾಡುತ್ತಿದ್ದರೂ ಆ ಒತ್ತಡವನ್ನು ನಿಭಾಯಿಸಲು ಆಂತರಿಕ ಬಲವನ್ನು ಹೊಂದಿರಬೇಕು ಮತ್ತು ಇದನ್ನು ದೈವತ್ವದ ಮೂಲಕ ಮಾತ್ರ ಸಾಧಿಸಬಹುದು ಎನ್ನುವುದನ್ನು ಕುಟುಂಬಗಳು ಕಲಿಸಬೇಕು ಎಂದು ಸೀತರಾಮನ್ ಹೇಳಿದರು.

error: Content is protected !!

Join the Group

Join WhatsApp Group