(ನ್ಯೂಸ್ ಕಡಬ) newskadaba.com ಕಡಬ, ಮಾ.08. ಮಹಿಳೆಯೋರ್ವರು ಒಬ್ಬಂಟಿಯಾಗಿದ್ದ ವೇಳೆ ಅಕ್ರಮವಾಗಿ ಮನೆಗೆ ಪ್ರವೇಶಿಸಿ ಮಾನಭಂಗಕ್ಕೆ ಯತ್ನಿಸಿದ ಕುರಿತು ಸೆಂದಿಲ್ ಕುಮಾರ್ ಎಂಬಾತನ ವಿರುದ್ಧ ಮಹಿಳೆ ಕಡಬ ಠಾಣೆಗೆ ದೂರು ನೀಡಿದ್ದಾರೆ.
ಠಾಣಾ ವ್ಯಾಪ್ತಿಯ ಓಟಕಜೆ ಸಿ ಆರ್ ಸಿ ಕಾಲನಿ ನಿವಾಸಿ ಸೆಂದಿಲ್‌ಕುಮಾರ್ ಎಂಬಾತ ಬುಧವಾರದಂದು ಅದೇ ಕಾಲನಿಯಲ್ಲಿನ ಮಹಿಳೆಯೋರ್ವರ ಅಕ್ರಮವಾಗಿ ಪ್ರವೇಶಿಸಿ ಮಾನಭಂಗಕ್ಕೆ ಯತ್ನಿಸಿದ್ದು, ಆ ವೇಳೆ ಬೊಬ್ಬೆ ಹೊಡೆದಾಗ ನೆರೆಮನೆಯವರು ಆಗಮಿಸುವುದನ್ನು ಕಂಡ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಹಿಳೆ ನೀಡಿದ ದೂರಿನನ್ವಯ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.