(ನ್ಯೂಸ್ ಕಡಬ) newskadaba.com ಕಡಬ, ಸೆ. 23. ಕಸ್ತೂರಿ ರಂಗನ್ ವರದಿ ಜಾರಿಗೆ ಬರುವ ಮತ್ತು ಪರಿಸರ ಪರ ಯೋಜನೆ ಹಾಗೂ ಜಂಟಿ ಸರ್ವೇ ಮಾಡುವ ಬಗ್ಗೆ ಶಾಶ್ವತ ಪರಿಹಾರಕ್ಕಾಗಿ ಹೋರಾಟದ ರೂಪುರೇಷೆಗಳನ್ನು ತಯಾರಿಸಲು ಗುಂಡ್ಯ, ಶಿರಾಡಿ, ಸಿರಿಬಾಗಿಲು, ಕೊಂಬಾರು ಗ್ರಾಮಸ್ಥರಿಂದ ಬೃಹತ್ ಪ್ರತಿಭಟನಾ ಸಭೆಯು ಗುಂಡ್ಯದ ಮಾಡ ಮೈದಾನದಲ್ಲಿ ಭಾನುವಾರದಂದು ನಡಯಿತು.
ಸಭೆಯ ವೇದಿಕೆಯಲ್ಲಿ ಮಲೆನಾಡು ಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಧರ್ಮಗುರು ಆದರ್ಶ ಜೋಸೆಫ್, ಪ್ರಸನ್ನ ಕುಮಾರ ಕುಮಾರಪುರ, ದಾಮೋದರ ಗುಂಡ್ಯ, ರಾಮಚಂದ್ರ ಆಮಡ್ಕ, ಪ್ರಮುಖರಾದ ಗಣೇಶ್ ಅನಿಲ, ಯತೀಶ್ ಆಮಡ್ಕ, ಪದ್ಮನಾಭ ಅನಿಲ,ಬಾಲಚಂದ್ರ ಅನಿಲ, ಜಿಮ್ಸನ್ ಶಿರಾಡಿ ಪಂಚಾಯತ್ ಮಾಜಿ ಅಧ್ಯಕ್ಷರು, ವಸಂತ ಅನಿಲ, ತೀರ್ಥಕುಮಾರ್ ದೇರಣೆ, ಮಂಜುನಾಥ ಪೇರುಂದೋಡಿ, ವಿನಯ ಕಲ್ಲರ್ತನೆ, ವಿನೋದ್ ಹೊಳ್ಳಾರ್, ಪವನ್ ನೀರಾಯ, ನಾರಾಯಣ ಅಮ್ಮಾಜೆ ಮೊದಲಾದವರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಮುಂದಿನ ಪ್ರತಿಭಟನೆಯ ರೂಪು ರೇಷೆಯನ್ನು ಸಿದ್ದಪಡಿಸಲಾಯಿತು.