ಲೈಂಗಿಕ ಕಿರುಕುಳವನ್ನು ಪ್ರತಿರೋಧಿಸಿದ್ದಕ್ಕಾಗಿ 6 ವರ್ಷದ ಬಾಲೆಯನ್ನು ಹತ್ಯೆಗೈದ ಪ್ರಾಂಶುಪಾಲ*

(ನ್ಯೂಸ್ ಕಡಬ) newskadaba.com ಗುಜರಾತ್ ಸೆ.23: ಬಾಲಕಿಯು ತನ್ನ ಮೇಲಾಗುವ ಲೈಂಗಿಕ ದೌರ್ಜನ್ಯ ನಡೆಸುವ ಪ್ರಯತ್ನವನ್ನು ಪ್ರತಿರೋಧಿಸಿದಾಗ ಸರಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು ಹತ್ಯೆಗೈದಿರುವ ಘಟನೆ ಗುಜರಾತ್‌ನ ದಾಹೋಡ್ ಜಿಲ್ಲೆಯಲ್ಲಿ ನಡೆದಿದ್ದು, ಈ ಪ್ರಕಾರ ಆರೋಪಿ ಪ್ರಾಂಶುಪಾಲರನ್ನು ಬಂಧಿಸಲಾಗಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಮೃತದೇಹವು ಸಿಂಗ್ವಾಡ ತಾಲ್ಲೂಕಿನಲ್ಲಿರುವ ಶಾಲಾ ಆವರಣದೊಳಗೆ ಗುರುವಾರ ಪತ್ತೆಯಾಗಿದ್ದು, ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಪ್ರಯತ್ನವನ್ನು ಬಾಲಕಿಯು ಪ್ರತಿರೋಧಿಸಿದ್ದರಿ ರಿಂದ ಪ್ರಾಂಶುಪಾಲ ಗೋವಿಂದ್ ನಾಥ್ ಆಕೆಯನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜ್‌ದೀಪ್ ಸಿಂಗ್ ಝಲ ತಿಳಿಸಿದ್ದಾರೆ.

Also Read  'ವಾಲ್ಮಿಕಿ- ಮುಡಾ ಹಗರಣದ ದಾಖಲೆಗಳನ್ನು ನೀಡಿದ್ದೇ ಕಾಂಗ್ರೆಸ್ ನಾಯಕರು'- ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ         


ಮೃತ ಬಾಲಕಿಯ ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ, ಆಕೆಯನ್ನು ಉಸಿರುಗಟ್ಟಿಸಿ ಹತ್ಯೆಗೈದಿರುವುದು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.

 

error: Content is protected !!
Scroll to Top