(ನ್ಯೂಸ್ ಕಡಬ) newskadaba.com ನ್ಯೂಯಾರ್ಕ್ ಸೆ.23. ಪ್ರಧಾನಿ ಮೋದಿ 3 ದಿನಗಳ ಅಮೆರಿಕಾ ಪ್ರವಾಸದ ವೇಳೆ ಇಲ್ಲಿ 15 ಟೆಕ್ ಸಿಇಒಗಳ ಜೊತೆ ದುಂಡು ಮೇಜಿನ ಸಭೆ ನಡೆಸಿದ್ದು, ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ನಿವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಮೊದಲಾದವರು ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸುಂದರ್ ಪಿಚೈ, ಭಾರತದ ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಎಐ ಬೆಳವಣಿಗೆ ಆಗಬೇಕೆಂದು ಮೋದಿ ಬಯಸುತ್ತಾರೆ ಎಂದಿದ್ದಾರೆ. ಸೆಮಿಕಂಡಕ್ಟರ್ ಚಿಪ್ ಕಂಪನಿ ನಿವಿಡಿಯಾದ ಸಿಇಒ ಜೆನ್ಸೆನ್ ಹುವಾಂಗ್ ಮಾತನಾಡಿ, ತಂತ್ರಜ್ಞಾನದ ಬಗ್ಗೆ ನಿರಂತರವಾಗಿ ತಿಳಿದುಕೊಳ್ಳಲು ಬಯಸುವ ಅಪೂರ್ವ ವಿದ್ಯಾರ್ಥಿಗೆ ನರೇಂದ್ರ ಮೋದಿ ಅವರನ್ನು ಹೋಲಿಸುತ್ತಾ ಶ್ಲಾಘಿಸಿದ್ದಾರೆ.
ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಗೂಗಲ್ ಮತ್ತು ನಿವಿಡಿಯಾ ಸಿಇಒ ಗಳು
