ದೆಹಲಿಯ 8ನೇ ಸಿಎಂ ಅಧಿಕಾರ ವಹಿಸಿಕೊಂಡ ಆತಿಶಿ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 23. ದೆಹಲಿಯ ಎಂಟನೇ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ ನಾಯಕಿ ಆತಿಶಿ ಇಂದು  ಅಧಿಕಾರ ವಹಿಸಿಕೊಂಡರು.

ಈ ವೇಳೆ ಮಾತನಾಡಿದ ಅವರು, ಭಗವಾನ್ ರಾಮನ ಪಾದಗಳನ್ನು ಸಿಂಹಾಸನದ ಮೇಲೇರಿಸಿ ಭರತ ಆಡಳಿತ ನಡೆಸಿದ ರೀತಿಯಲ್ಲೇ ಮುಂದಿನ ನಾಲ್ಕು ತಿಂಗಳು ಮುಖ್ಯಮಂತ್ರಿಯಾಗಿ ನಾನು ಕಾರ್ಯನಿರ್ವಹಿಸುತ್ತೇನೆ. ಫೆಬ್ರುವರಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ದೆಹಲಿಯ ಜನತೆ ಕೇಜ್ರಿವಾಲ್ ಅವರನ್ನು ಮರಳಿ ಮುಖ್ಯಮಂತ್ರಿ ಸ್ಥಾನಕ್ಕೆ ಕರೆತರುತ್ತಾರೆ ಎಂದು ಭಾವಿಸುತ್ತೇನೆ. ಅಲ್ಲಿಯವರೆಗೆ ಅವರ ಕುರ್ಚಿ ಸಿಎಂ ಕಚೇರಿಯಲ್ಲೇ ಇರುತ್ತದೆ ಎಂದು ಅವರು ಹೇಳಿದ್ದಾರೆ.

Also Read  ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ ಪಟಾಕಿ ಸ್ಫೋಟ ➤ ನಾಲ್ವರು ಮೃತ್ಯು..!

 

error: Content is protected !!
Scroll to Top