ಗಿನ್ನಿಸ್ ದಾಖಲೆ ಬರೆದ ನಟ ಮೆಗಾ ಸ್ಟಾರ್ ಚಿರಂಜೀವಿ

(ನ್ಯೂಸ್ ಕಡಬ) newskadaba.com ಹೈದರಾಬಾದ್, ಸೆ. 23. ನಟ ಮೆಗಾ ಸ್ಟಾರ್ ಚಿರಂಜೀವಿ ಅವರು ಗಿನ್ನಿಸ್ ದಾಖಲೆ ಬರೆದಿದ್ದು, ಇಂದು ಅವರಿಗೆ ‘ಭಾರತೀಯ ಚಿತ್ರರಂಗದ ಮೋಸ್ಟ್ ಪ್ರೊಫೈಲಿಕ್ ಸ್ಟಾರ್’ ಎಂದು ಪ್ರಮಾಣಪತ್ರ ನೀಡಲಾಗಿದೆ.

ಚಿರಂಜೀವಿ ಅವರು ಈವರೆಗೂ 156 ಸಿನಿಮಾಗಳಲ್ಲಿ ನಟಿಸಿದ್ದು, ಕಳೆದ 46 ವರ್ಷಗಳಿಂದ ಅವರು ಸಿನಿಮಾರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 24 ಸಾವಿರ ಡ್ಯಾನ್ಸ್ ಸ್ಟೆಪ್ಸ್ ಹಾಕಿದ್ದು, ಈ ಸಾಧನೆಗಾಗಿ ಅವರ ಹೆಸರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಲ್ಲಿ ಸೇರ್ಪಡೆಗೊಂಡಿದೆ. ಹೈದರಾಬಾದ್‌ನಲ್ಲಿ ಚಿರಂಜೀವಿ ಅವರಿಗೆ ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣಪತ್ರ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಾಲಿವುಡ್ ನಟ ಆಮಿರ್ ಖಾನ್ ಆಗಮಿಸಿದ್ದರು.

Also Read  ಅಕ್ರಮ ಮರಳುಗಾರಿಕೆ ಅಡ್ಡೆಗಳಿಗೆ ಪೊಲೀಸ್ ದಾಳಿ        ➤ 6 ಲಾರಿಗಳು ವಶಕ್ಕೆ 

error: Content is protected !!
Scroll to Top