ಯುಪಿಎಸ್ಸಿ 3ನೇ ಬಾರಿಗೆ ಬರೆದು ಐಎಎಸ್ ಅಧಿಕಾರಿಯಾದ ವಿಶಾಖಾ ಯಾದವ್

(ನ್ಯೂಸ್ ಕಡಬ) newskadaba.com ದೆಹಲಿ 23: ಮೂರನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ವಿಶಾಖಾ ಯಾದವ್. ವಿಶಾಖಾ ಅವರು ಬೆಂಗಳೂರಿನ ಕಂಪನಿಯಲ್ಲಿ ಚೆನ್ನಾಗಿ ಸಂಪಾದನೆ ಮಾಡುತ್ತಿದ್ದರು. ಆದರೆ ವಿಶಾಖಾ ಅವರಿಗೆ ಐಎಎಸ್ ಅಧಿಕಾರಿಯಾಗಬೇಕೆಂಬ ಅಚಲವಾದ ಕನಸು ಇತ್ತು. ಹೀಗಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಐಎಎಸ್ ಅಧಿಕಾರಿಯಾಗುವತ್ತ ಗಮನ ಹರಿಸಿದರು.

ತಮ್ಮ ಮೊದಲೆರಡು ಪ್ರಯತ್ನಗಳಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ವಿಶಾಖಾ ವಿಫಲರಾಗಿದ್ದು, ಬಳಿಕ 2019ರಲ್ಲಿ ಮೂರನೇ ಬಾರಿ ಪರೀಕ್ಷೆ ಬರೆದ ಅವರು 6ನೇ ಸ್ಥಾನ ಪಡೆದು ಉತ್ತೀರ್ಣರಾಗುವಲ್ಲಿ ಯಶಸ್ವಿಯಾಗಿರುತ್ತಾರೆ. ತಮ್ಮ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸು ಈ ಮೂಲಕ ಮಾಡಿಕೊಳ್ಳುತ್ತಾರೆ.

Also Read  ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ     ಲೋಪದೋಷ ಸರಿಪಡಿಸುವಂತೆ ಸುಪ್ರೀಂ ಸೂಚನೆ            

error: Content is protected !!
Scroll to Top