(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 23. ರೀಲ್ಸ್ ಮಾಡಲು ಕೆರೆಗೆ ಹಾರಿದ ಯುವಕ ನಾಪತ್ತೆಯಾದ ಘಟನೆ ನಗರದ ಮಾರತಹಳ್ಳಿಯ ಪಣತ್ತೂರು ಕೆರೆಯಲ್ಲಿ ರವಿವಾರ ವರದಿಯಾಗಿದೆ.
ಸೆ.22ರ ಸಂಜೆ 4.20ರ ಸುಮಾರಿಗೆ ಘಟನೆ ನಡೆದಿದ್ದು, ರೀಲ್ಸ್ ಮಾಡುವ ಸಲುವಾಗಿ ಮೂರು ಜನ ಸ್ನೇಹಿತರು ಪಣತ್ತೂರು ಕೆರೆಯ ಬಳಿ ಬಂದಿದ್ದು, ಒಬ್ಬನಿಗೆ ವಿಡಿಯೋ ಮಾಡಲು ಹೇಳಿ ಇಬ್ಬರು ಕೆರೆಗೆ ಹಾರಿದ್ದಾರೆ. ಈ ವೇಳೆ ಇಬ್ಬರಲ್ಲಿ ಓರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಘಟನೆಯ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Also Read ಹಾಸ್ಟೆಲ್ ರೂಂನಲ್ಲಿ ವಿದ್ಯಾರ್ಥಿನಿ ಕೊಲೆ ಪ್ರಕರಣ ➤ ನಾಪತ್ತೆಯಾಗಿದ್ದ ಸೆಕ್ಯುರಿಟಿ ಗಾರ್ಡ್ ಮೃತದೇಹ ಪತ್ತೆ