ನಾಳೆ (ಸೆ.23) ಕಡಬದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್, SYS, SSF, KCF ವತಿಯಿಂದ ಮೀಲಾದ್ ಸಂದೇಶ ಹಾಗೂ ಆಂಬ್ಯುಲೆನ್ಸ್ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ಸೆ.22. ಕರ್ನಾಟಕ ಮುಸ್ಲಿಂ ಜಮಾಅತ್ ಝೋನ್ ಕಮಿಟಿ, ಎಸ್’ವೈಎಸ್, ಎಸ್ಸೆಸ್ಸೆಫ್, ಕೆಸಿಎಫ್ ಸುನ್ನಿ ಸಂಘ ಕುಟುಂಬದ ಸಹಯೋಗದಲ್ಲಿ ನಾಳೆ (ಸೆಪ್ಟೆಂಬರ್ 23) ಸೋಮವಾರ ಸಂಜೆ 4 ರಿಂದ ಕಡಬ ಜಂಕ್ಷನ್ ಬಳಿ ಬೃಹತ್ ಮೀಲಾದ್ ಸಂದೇಶ ಭಾಷಣ ಹಾಗೂ ಆಂಬ್ಯುಲೆನ್ಸ್ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದೆ.

ಬಹು ಡಾ| MSM ಝೈನಿ ಕಾಮಿಲ್ ಸಖಾಫಿ ಸಂದೇಶ ಭಾಷಣ ಮಾಡಲಿದ್ದು, ಧಾರ್ಮಿಕ ಮುಖಂಡರು, ಸಂಘ ಕುಟುಂಬದ ನಾಯಕರು, ಜನ ಪ್ರತಿನಿಧಿಗಳು, ಸಮಾಜದ ಮುಖಂಡರು ಭಾಗವಹಿಸಲಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಂಬ್ಯುಲೆನ್ಸ್ ನಿರ್ವಹಣಾ ಸಮಿತಿ ಚೇರ್ಮನ್ ಬಶೀರ್ ಚೆನ್ನಾರ್ ಹಾಗೂ ಕನ್ವೀನರ್ ಝಿಯಾರ್ ಕೋಡಿಂಬಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಜಗತ್ತನ್ನು ಪ್ರೀತಿಯಿಂದ ಕಾಣಲು ಸಾಹಿತ್ಯದಿಂದ ಸಾಧ್ಯ: ಜಯಂತ್ ಕಾಯ್ಕಿಣಿ ► ಶ್ರೀ ರಾಮಕುಂಜೇಶ್ವರ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ

error: Content is protected !!
Scroll to Top