ಈದ್- ಮೊಹರಂ ಸಂದರ್ಭದಲ್ಲಿ 2 ಗ್ಯಾಸ್ ಸಿಲಿಂಡರ್‌ ಉಚಿತ: ಅಮಿತ್ ಶಾ ಘೋಷಣೆ

(ನ್ಯೂಸ್ ಕಡಬ) newskadaba.com ಜಮ್ಮುಕಾಶ್ಮೀರ, ಸೆ.21. ಈದ್ ಮತ್ತು ಮೊಹರಂ ಸಂದರ್ಭದಲ್ಲಿ 2 ಗ್ಯಾಸ್ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು-ಕಾಶ್ಮೀರದಲ್ಲಿ ಘೋಷಿಸಿದ್ದಾರೆ.


ಜಮ್ಮು ಕಾಶ್ಮೀರದ ಮೆಂದಾರ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಅಬ್ದುಲ್ಲಾ, ಮುಫ್ತಿ ಮತ್ತು ನೆಹರೂ-ಗಾಂಧಿ ಕುಟುಂಬವು 90 ರ ದಶಕದಿಂದಲೂ ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರವನ್ನು ಹರಡಿದೆ. ಅದ್ರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ಕರ್ಫ್ಯೂ ಕೊನೆಗೊಳಿಸಿದೆ. ಇಲ್ಲಿನ ಯುವಕರ ಕೈಯಲ್ಲಿ ಕಲ್ಲಿನ ಬದಲು ಲ್ಯಾಪ್ ಟಾಪ್ ನೀಡಲಾಗಿದೆ” ಎಂದು ಹೇಳಿದ್ದಾರೆ.

Also Read  ಶಸ್ತ್ರಾಸ್ತ್ರ ತ್ಯಜಿಸಿ ಶರಾಣಗತಿಗೆ ಸಜ್ಜಾದ 400 ಉಗ್ರರು..!

 

error: Content is protected !!
Scroll to Top