(ನ್ಯೂಸ್ ಕಡಬ) newskadaba.com ಧಾರವಾಡ ಸೆ. 21: ಕಳೆದ ಕೆಲವು ದಿನಗಳಿಂದ ಡ್ರಗ್ಸ್ ತಪಾಸಣೆ ಕಾರ್ಯವನ್ನು ಪೊಲೀಸ್ ಇಲಾಖೆ ತೀವ್ರಗೊಳಿಸಿದ್ದು ಶ್ಲಾಘನೀಯ. ಡ್ರಗ್ಸ್ ಪಾಸಿಟಿವ್ ಬಂದಿರುವ ಪ್ರತಿ ಪ್ರಕರಣಗಳನ್ನು ಪಾಲೊಅಪ್ ಮಾಡಿ, ನಿಜವಾದ ಕಾರಣಕರ್ತರಿಗೆ ಶಿಕ್ಷೆಆಗುವಂತೆ , ಅವುಗಳನ್ನು ಮುಕ್ತಾಯಗೊಳಿಸಬೇಕು ಎಂದು ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.ಶಾಲೆ, ಕಾಲೇಜು, ವಿವಿ ಕ್ಯಾಂಪಸ್‍ಗಳು ಡ್ರಗ್ಸ್ ಮುಕ್ತವಾಗಿರುವಂತೆ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳೊಂದಿಗೆ ಪಾಲಕರು, ಶಿಕ್ಷಕರಲ್ಲಿಯೂ ಮಾದಕ ವಸ್ತುಗಳ ಕುರಿತು ವ್ಯಾಪಕ ಪ್ರಚಾರದ ಮೂಲಕ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.